
ಯಲ್ಲಾಪುರ: ನಾವು ನಿವೃತ್ತರಾದ ಮೇಲೆ, ನಮ್ಮ ಜೀವನಾನುಭವಗಳನ್ನು ಸಮಾಜಕ್ಕೆ ನೀಡಿ, ಸಮಸ್ಯೆಗಳು ಶಾರೀರಿಕವಾಗಿ ಕಾಡಬಹುದು. ಆದರೆ ಸಮಾಜಮುಖಿ ಚಿಂತನೆಗಳಿಂದ ಜೀವನವನ್ನು ಸ್ವಸ್ಥವಾಗಿಸಿಕೊಳ್ಳಿ’ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶ್ರೀರಂಗ ಕಟ್ಟಿ ಹೇಳಿದರು. ಅವರು ಸರ್ಕಾರಿ ನೌಕರರ ಭವನದಲ್ಲಿ 75 ವಸಂತ ಪೂರೈಸಿದ ನಿವೃತ್ತ ಹಿರಿಯರನ್ನು ಸನ್ಮಾನಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ಎಲ್ಲ ಚಟುವಟಿಕೆಗಳನ್ನು ಕೊವಿಡ್ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಅವರವರ ಸೇವಾ ಬದುಕಿಗನುಗುಣವಾಗಿ, ಸರ್ಕಾರಿ ಪಿಂಚಣಿ ಸಿಗುತ್ತಿದೆ. ಅಷ್ಟರಲ್ಲಿಯೂ ಉಳಿಸಿ ತೊಂದರೆಯಲ್ಲಿರುವವರಿಗೆ ಸಹಾಯ ಹಸ್ತ ನೀಡುವ ಮನಸ್ಸನ್ನು ಬೆಳೆಸಿಕೊಳ್ಳಬೇಕು.ನಮ್ಮ ಸಂಪರ್ಕದಲ್ಲಿ ಬರುವ ಅನೇಕರಿಗೆ ಜ್ಞಾನ ನೀಡುವ ಕೆಲಸ ನಮ್ಮಿಂದಾಗಬೇಕು. ಸಂಘದ ಚಟುವಟಿಕೆಗಳಲ್ಲಿ ಸಲಹೆ ಸೂಚನೆ ನೀಡುತ್ತಾ ಕ್ರಿಯಾಶೀಲರಾಗಬೇಕು. ಎಂದರು.
ಸನ್ಮಾನ ಸ್ವೀಕರಿಸಿದ ಸಂಘದ ಗೌರವಾಧ್ಯಕ್ಷ ಕೆ.ಕೆ. ನಾಯ್ಕ ಮಾತನಾಡಿ, ನಾವೆಲ್ಲ ಸಂತೃಪ್ತರು, ‘ಆತ್ಮಾಭಿಮಾನ
ಇಟ್ಟುಕೊಂಡು ಇತಿ ಮಿತಿಯಲ್ಲಿ ಬದುಕಬೇಕು.ಹೈಟೆಕ್ ಚಿಕಿತ್ಸೆ ಇಂದು ಲಭ್ಯ ವಿರುವದರಿಂದ ವಯೋ ಸಹಜ ಕಾಯಿಲೆ ಗಳನ್ನು ನಿರ್ಲಕ್ಷ್ಯ ಮಾಡದೇಆರೋಗ್ಯ ದತ್ತ ಲಕ್ಷ್ಯ ವಹಿಸಿದರೆ ಎಷ್ಟೇ ವಯಸ್ಸಾದರು ಚಟುವಟಿಕೆಯಿಂದ ಇರಬಹುದಾಗಿದೆ. ಸಂಘದವತಿಯಿಂದ ಪ್ರತಿಯೊಬ್ಬ ಸದಸ್ಯರ ಸಂಪರ್ಕ ವನ್ನು ಇಟ್ಟುಕೊಂಡು ತೊಂದರೆಯಲ್ಲಿದ್ದವರಿಗೆ ಸಂತ್ವನ ಸಹಾಯ ವನ್ನು ನೀಡುವಂತಾಗಬೇಕು ಎಂದರು ಹಿರಿಯ ಪತ್ರಕರ್ತರಾದ ಶಂಕರ ಭಟ್ಟ ತಾರೀಮಕ್ಕಿ , ಕೆ.ಎಸ್.ಭಟ್ಟ ಮಾತನಾಡಿದರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯ್ಕ, ಪತ್ರಕರ್ತೆ ಪ್ರಭಾ ಜೈರಾಜ್, ಶುಭ ಹಾರೈಸಿದರು. ಹಿರಿಯ ನಿವೃತ್ತ ನೌಕರರಾದ ಕೆ.ಕೆ. ನಾಯ್ಕ, ಎನ್.ಎನ್. ನಾಯ್ಕ, ವಿ. ಟಿ. ನಾಯ್ಕ, ಎಸ್.ಟಿ.ಭಂಡಾರಿ, ಸೈಫುದ್ದೀನ ಶೇಖ, ಜೆ.ಪಿ.ನರೋನಾ ಇವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಸುರೇಶ ಬೋರಕರ್ ಸ್ವಾಗತಿಸಿದರು, ಎಸ್. ಎಲ್ ಜಾಲಿಸತಗಿ ನಿರ್ವಹಿಸಿದರು .
Leave a Comment