ಹೊನ್ನಾವರ: ತಾಲೂಕಿನ ಅಪ್ಪರ ಕೊಂಡ ಬೀಚ್ ನಲ್ಲಿ ನಿಬರ್ಂಧದ ನಡುವೆಯೂ ರಾತ್ರಿ ವೇಳೆ ಅನಧಿಕೃತ ವಾಗಿ ಡೋಣ್ ಕ್ಯಾಮರಾ ಹಾರಿಸುತಿದ್ದ ಕ್ಯಾಮರಾಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದ ಘಟನೆ ಮಂಗಳವಾರ ನಡೆದಿದೆ.
ಬೇರೆ ಬೇರೆ ಊರಿನಿಂದ ಬಂದು ಕಡಲ ತೀರಗಳಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಲಾಗುತ್ತಿದ್ದು ಇದಕ್ಕಾಗಿ ಡೋನ್ ಕ್ಯಾಮೆರಾಗಳನ್ನು ಬಳಸಲಾ ಗುತ್ತಿದೆ. ಕ್ಯಾಮರಾಗಳು ತಮ್ಮ ವ್ಯಾಪ್ತಿ ಬಿಟ್ಟು ಬೇರೆ ಪ್ರದೇಶಗ ಳಲ್ಲಿ ಹಾರುತ್ತಿರುವುದರಿಂದ ಸ್ಥಳೀಯರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಸಾಯಂಕಾಲ ವೇಳೆ ಫೋಟೋ- ಶೂಟ್ ನಡೆಯುತ್ತಿದ್ದರಿಂದ ವಾಹನಗಳು ಹೆಚ್ಚಾಗಿ ಓಡಾಟ ಕ್ಕೆ ತೊಂದರೆಯಾಗುತ್ತಿದ್ದು ಈ ವಿಷಯವಾಗಿ ಪ್ರವಾಸಿಗರ ಹಾಗೂ ಸ್ಥಳೀಯರ ನಡುವೆ ಗಲಾಟೆಗಳು ನಡೆದ ಉದಾಹರಣೆಗೆ ಸಾಕಷ್ಟು ನಡೆದಿದ್ದವು.
ಇದನ್ನೆಲ್ಲ ಮನಗಂಡ ಪೊಲೀಸ್ ಇಲಾಖೆ ಸಾಯಂಕಾಲ 6 ಗಂಟೆಯ ನಂತರ ಕಡಲ ತೀರಗಳಲ್ಲಿ ಡೋನ್ ಕ್ಯಾಮರಾಗಳನ್ನು ಹಾರಿಸದಿರುವಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಪೊಲೀಸ್ ಇಲಾಖೆಯು ಆದೇಶಕ್ಕು ಬೆಲೆ ಕೊಡದೆ ಮಂಗಳ ವಾರ ಸಂಜೆ ಕೂಡ ಡೋನ್ ಕ್ಯಾಮರಾ ಹಾರಿಸಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಮಂಕಿ ಠಾಣಾ ಪೊಲೀಸರು ಕ್ಯಾಮರಾಗಳನ್ನು ವಶಕ್ಕೆ ಪಡೆದು ಅಂತಿಮ ಎಚ್ಚರಿಕೆ ನೀಡಿ ವಾಪಸ್ ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
Leave a Comment