ಯಲ್ಲಾಪುರ: ತಾಲೂಕಿನ ಬಿಸಗೋಡು ರಸ್ತೆ ಬದಿಯಲ್ಲಿ ಚಿರತೆಯೊಂದು ಬೇಟೆಗಾರರ ಗುಂಡೇಟಿಗೆ ಬಲಿಯಾಗಿದ್ದು ಬೆಳಕಿಗೆ ಬಂದಿದೆ. ಆನಗೋಡ- ಬೀಸಗೋಡ ರಸ್ತೆಯ ಬದಿಯಲ್ಲಿ ಚಿರತೆಯೊಂದು ಅಸಹಜ ಸಾವನಪ್ಪಿರುವದನ್ನು ಕಂಡ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಿದ್ದರು.
ಬಿಸಗೋಡ ಅರಣ್ಯ ಶಾಖೆಯ ಮೋಜಣಿದಾರ ಸುನೀಲ ಜಂಗಮಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಚಿರತೆಯ ಕಳೆಬರವನ್ನು ಯಲ್ಲಾಪುರ ವಲಯ ಕಚೇರಿ ಆವರಣಕ್ಕೆ ತಂದರು.ನ್ಯಾಯಾಲಯದ ಆದೇಶದಂತೆ ತಾಲೂಕು ಪಶು ವೈದ್ಯಾಧಿಕಾರಿ ಡಾ.ಸುಬ್ರಾಯ ಭಟ್ಟರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಚಿರತೆಯು ಗರ್ಭಿಣಿಯಾಗಿದ್ದು ಗುಂಡೇಟಿನಿAದ ಮೃತಪಟ್ಟಿರುವದಾಗಿ ತಿಳಿದುಬಂದಿದೆ.

ನಂತರ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲಕೃಷ್ಣ ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಹೆಚ್.ಎ. ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯಂ ಅವರ ಸಮ್ಮುಖದಲ್ಲಿ ದಹನ ಪ್ರಕ್ರಿಯೆ ನಡೆಯಿತು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Leave a Comment