ಬೆಂಗಳೂರು: ರಷ್ಯಾ -ಉಕ್ರೇನ್ ಯುದ್ಧದಿಂದಾಗಿ ಪೆಟ್ರೋಲ್, ಡಿಸೇಲ್, ದಿನಸಿವಸ್ತುಗಳು, ಅಡುಗೆ ಎಣ್ಣೆ ಸೇರಿದಂತೆ ಅನೇಕ ಪದಾರ್ಥಗಳ ಬೆಲೆ ಹೆಚ್ಚಳದ ಬೆನ್ನಲ್ಲೇ ಏಪ್ರಿಲ್ 15 ರಿಂದ ಬಿಯರ್ ದರ ಹೆಚ್ಚಾಗಲಿದೆ.
ಬಿಯರ್ ತಯಾರಿಕೆಗೆ ಪ್ರಮುಖವಾಗಿ ಬೇಕಾಗುವ ಬಾರ್ಲಿಯನ್ನು ಉಕ್ರೇನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಯುದ್ಧದ ಕಾರಣದಿಂದಾಗಿ ಬಾರ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಎಲ್ಲ ಬ್ರಾಂಡ್ಗಳ ಬಿಯರ್ ಇನ್ನು ಮುಂದೆ ತುಟ್ಟಿಯಾಗಲಿವೆ. ಈಗಾಗಲೇ ಮದ್ಯಪಾನ ಕಂಪನಿಗಳು ಸರ್ಕಾರದ ಮುಂದೆ ಬಿಯರ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದಿವೆ.
ಇನ್ನೂ ಕೆಲವೇ ದಿನಗಳಲ್ಲಿ ಬಿಯರ್ಪ್ರಿಯರಿಗೆ ವಗರು ತಗುಲಿದೆ.ಈಗಾಗಲೇ ಬಹುತೇಕ ಎಲ್ಲ ಬಿಯರ್ ಕಂಪನಿಗಳು ಪ್ರತಿ ಬಾಟಲ್ಗೆ 5 ರಿಂದ 10 ರೂ. ಏರಿಸುವ ಪ್ರಸ್ತಾಪವನ್ನು ನಿಯಮದಂತೆ ಅಬಕಾರಿ ಇಲಾಖೆಗೆ ಸಲ್ಲಿಸಿ, ಅನುಮತಿ ಪಡೆದುಕೊಂಡಿವೆ.
ಬಹುತೇಕ ಏ. 15ರಿಂದ ಎಲ್ಲ ಬ್ರಾಂಡ್ ಬಿಯರ್ ಮೇಲಿನ ಪರಿಷ್ಕೃತ ದರ ಜಾರಿಗೆ ಬರಲಿದೆ, ಎಂದು ಮೂಲಗಳು ಖಚಿತಪಡಿಸಿವೆ. ಕಿಂಗ್ ಫಿಷರ್, ಬಡ್ ವೈಸರ್, ಟುಬೊರ್ಗ್ ಸೇರಿದಂತೆ ಎಲ್ಲಾ ಬಗೆಯ ಬಿಯರ್ ದರ ಹೆಚ್ಚಳವಾಗಲಿದೆ. ಇನ್ಮುಂದೆ ಮದ್ಯಪ್ರಿಯರು ಬಿಯರ್ ಕುಡಿಯಲೂ ಹೆಚ್ಚು ಹಣ ಕೊಡಲೇಬೇಕಿದೆ.
ಬಿಯರ್ ಉತ್ಪಾದನೆಗೆ ಪ್ರಮುಖವಾಗಿ ಬಳಸುವ ಬಾರ್ಲಿ ರಷ್ಯಾ ಮತ್ತು ಉಕ್ರೇನ್ನಿಂದ ಆಮದಾಗುತ್ತಿತ್ತು. ಅಲ್ಲಿ ಯುದ್ಧ ನಡೆಯುತ್ತಿರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಪೂರೈಕೆಯಾದರೂ ದುಬಾರಿ ಬೆಲೆ ತೆರಬೇಕಾಗಿದೆ. ಎರಡನೇಯದಾಗಿ, ಇತರೆ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ.
Leave a Comment