ಹೊನ್ನಾವರ : ತಾಲೂಕಿನ ಕವಲಕ್ಕಿಯ ಮಧು ಬಾರ್ ಎಂಡ್ ರೆಸ್ಟೋರೆಂಟಿನಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾಗ ತಡರಾತ್ರಿ ದಾಳಿ ನಡೆಸಿದ ಪೋಲಿಸರು ಸುಮಾರು 75 ಸಾವಿರ ಮೌಲ್ಯದ ವಿವಿಧ ಕಂಪನಿಯ ಮಧ್ಯ ಹಾಗೂ 6270 ರೂ, ನಗದು ವಶಪಡಿಸಿಕೊಂಡಿದ್ದಾರೆ. ಬಾರ್ ಮಾಲಿಕ ರೋಹಿದಾಸ ಅನಂತ ನಾಯ್ಕ ಪರಾರಿಯಾಗಿದ್ದಾನೆ. ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಸಿಪಿಐ ಚೆಲುವರಾಜ್, ಪಿಎಸ್ಐ ಆನಂದಮೂರ್ತಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಬಾರಿನಲ್ಲಿ ಅನಧಿಕೃತವಾಗಿ ಬೆಂಗಳೂರು ಮಾಲ್ಟ್ ವಿಸ್ಕಿ, ಯುಬಿ ಬಿಯರ್, ಬ್ಯಾಗ್ ಪೈಪರ್ ವಿಸ್ಕಿ, ಓಲ್ದ ಟ್ರಾವೆಲ್ ವಿಸ್ಕಿ, ಕಿಂಗ್ ಫಿಷರ್ ಬಿಯರ್, ಹೈವಡ್ರ್ಸ್ ವಿಸ್ಕಿ, ಮೆಕ್ಡೊವೆಲ್ ವಿಸ್ಕಿ, ಡಿಎಸ್ಟಿ ಬ್ಲಾಕ್ ವಿಸ್ಕಿ, ರಾಯಲ್ ಸ್ಟಾಗ್ ವಿಸ್ಕಿ, ಡೈರೆಕ್ಟರ್ ಸ್ಪೆಷಲ್ ವಿಸ್ಕಿ ಸಂಗ್ರಹಿಸಿಡಲಾಗಿತ್ತು.
ಇವುಗಳನ್ನು ಹೊನ್ನಾವರ ಪಟ್ಟಣದ ಜ್ಯೂಲಿಯಸ್ ಬಾರ್ ಎಂಡ್ ರೆಸ್ಟೋರೆಂಟ್ನಿಂದ ಅನಧಿಕೃತವಾಗಿ ಖರೀದಿಸಿ ಇಡಲಾಗಿತ್ತು ಎನ್ನಲಾಗಿದೆ. ಮಧು ಬಾರ್ ಮಾಲೀಕ, ಕೆಲಸಗಾರರು ಹಾಗೂ ಜ್ಯೂಲಿಯಸ್ ಬಾರ್ ಮಾಲೀಕನ ವಿರುದ್ಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment