
ಯಲ್ಲಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಸುಳ್ಳು ಆರೋಪ ಮಾಡಿ, ಕರ್ನಾಟಕದಲ್ಲಿ ಕೋಮು ಪ್ರಚೋದನೆಗೆ ಕಾರಣೀಕರ್ತರಾಗಿರುವ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಬಂಧಿಸುವಂತೆ ಹಿಂದೂ ವಾದಿಗಳು ಗುರುವಾರ ಪಿಎಸ್‌ಐ ಪ್ರಿಯಾಂಕಾ ನ್ಯಾಮಗೌಡ ಅವರಿಗೆ ಮನವಿ ಸಲ್ಲಿಸಿದರು.
ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕ, ಅಲ್ ಖೈದಾ ನಾಯಕ ಜವಾಹಿರಿ ಎಂಬಾತ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಹಿಜಾಬ್ ಗದ್ದಲದಲ್ಲಿ ಮಂಡ್ಯದ ವಿದ್ಯಾರ್ಥಿನಿ ಬೆಂಬಲಿಸಿ ಹೇಳಿಕೆ ನೀಡಿ 9 ನಿಮಿಷಗಳ ವಿಡಿಯೋ ಕ್ಲಿಪ್ಪಿಂಗ್ ಬಿಡುಗಡೆ ಮಾಡಿದ್ದಾನೆ. ಕೋಮು ಸಾಮರಸ್ಯ ಹಾಳು ಮಾಡುವ ದೇಶ, ಬಿಜೆಪಿ ವಿರೋಧಿಸಿ ನಡೆಯುತ್ತಿರುವ ಸಂಚಿನ ಬಗ್ಗೆ ನಮಗೆ ಈ ಹಿಂದೆ ಇದ್ದ ಸಂಶಯಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಅಗತ್ಯ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದೂ ಸಂಘಟನೆಗಳ ಪ್ರಮುಖ ರಾಮು ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವರ್, ಪಪಂ ಸದಸ್ಯರಾದ ಸೋಮೇಶ್ವರ ನಾಯ್ಕ, ಆದಿತ್ಯ ಗುಡಿಗಾರ್, ಪ್ರಮುಖರಾದ ರಾಕೇಶ ಗುಡಿಗಾರ್, ಶ್ರೀನಿವಾಸ್ ಗಾಂವರ್ ಇದ್ದರು.
Leave a Comment