ಯಲ್ಲಾಪುರ: ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿ(ರಿ.) ಬೆಂಗಳೂರು ಪ್ರಧಾನ ಮಾಡುವ ರಾಜ್ಯಮಟ್ಟದ “ಶಿಕ್ಷಣಸಿರಿ” ಪ್ರಶಸ್ತಿಗೆ ತಾಲೂಕಿನ ಬಿಸಗೋಡ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸತೀಶ ಯಲ್ಲಾಪುರ ಅವರು ಆಯ್ಕೆಯಾಗಿದ್ದಾರೆ. ಇಂದು ೧೦:೩೦ಕ್ಕೆ ಶಿರಸಿಯ ಶಾಸಕರ ಸರಕಾರಿ ಮಾದರಿ ಶಾಲೆಯಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲೆ ವಿಷಯದೆಡೆಗೆ ಆಸಕ್ತಿ ಮೂಡಿಸುತ್ತಿರುವ ನಿಟ್ಟಿನಲ್ಲಿ, ಹಲವಾರು ವರ್ಷಗಳ ಕಾರ್ಯಚಟುವಟಿಕೆಗಳನ್ನು ಪರಿಗಣಿಸಿ ಸದರಿ ಪ್ರಶಸ್ತಿಯನ್ನು ನೀಡಲಾಗಿದೆ.ಇವರು ಯಕ್ಷಗಾನ ಕಲಾವಿದರು ಆಗಿದ್ದಾರೆ.
Leave a Comment