
ಯಲ್ಲಾಪುರ : ಬುಡಕಟ್ಟು ಮೂಲ ಕಲೆಯನ್ನು ದೇಶದ ಸಂಸ್ಕೃತಿಯೊAದಿಗೆ ಸಮ್ಮಿಲನಗೊಳಿಸುವಲ್ಲಿ ನಮ್ಮ ಇಲಾಖೆಯಿಂದ ಆದ್ಯತೆ ನೀಡಲಗುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಸಾಂಸ್ಕೃತಿP Àಕಾರ್ಯಕ್ರಮವೂ ಸಹ ಬುಡಕಟ್ಟುಜನರ ಕಲೆ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬೆಳೆಸುವ ಕಾರ್ಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬುಡಕಟ್ಟು ಸಮುದಾಯಗಳ ದೊಡ್ಡ ಸಮಾವೇಶ ಮಾಡಿ ಯುವಪೀಳಿಗೆಯವರನ್ನು ಸಾಂಸ್ಕೃತಿಕವಾಗಿ ಜೋಡಿಸಲಾಗುತ್ತದೆ.ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ಕುಮಾರ ಹೇಳಿದರು

ಅವರು ಪಟ್ಟಣದತಾಲೂಕ ಪಂಚಾಯತಆವರಣದಗಾAಧೀಕುಟೀರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೀವನ ವಿಕಾಸ್‌ಟ್ರಸ್ಟ್ಯಲ್ಲಾಪುರಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬುಡಕಟ್ಟು (ಸಿದ್ದಿ) ಸಾಂಸ್ಕ್ರತಿಕಉತ್ಸವವನ್ನು ಉದ್ಘಾಟಿಸಿ ಮಾತನಾಡಿ , . ಬುಡಕಟ್ಟು ಸಮುದಾಯದವರುಅರಣ್ಯದ ನಡುವೆ ಬದುಕುಕಟ್ಟಿಕೊಂಡುಅರಣ್ಯವನ್ನುಕೂಡರಕ್ಷಿಸುತ್ತಿದ್ದಾರೆ. ಅಲ್ಲದೆತಮ್ಮ ಮೂಲ ಸಂಸ್ಕೃತಿ ಸಂಸ್ಕಾರ ಹಾಗೂ ಆಹಾರ ಪದ್ಧತಿ ಉಡುಗೆ-ತೊಡುಗೆಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಮುಂದಿನ ಪೀಳಿಗೆಗೆ ಈ ಸಂಸ್ಕೃತಿಯನ್ನು ಹಸ್ತಾಂತರ ಮಾಡುವಕಾರ್ಯವಾಗಬೇಕು.
ಅಂತಯೇ ಈ ಸಂದರ್ಭದಲ್ಲಿ ಸಚಿವ ಶಿವರಾಮ ಹೆಬ್ಬಾರ್‌ಅವರು ನನ್ನ ಮೇಲೆ ಹೇರಿದಒತ್ತಡ ಹಾಗೂ ಅವರಕೋರಿಕೆಯ ಮೇರೆಗೆಅರಣ್ಯ ಪ್ರದೇಶಗಳಲ್ಲಿ ಕೃಷಿ ಮಾಡಿಕೊಂಡು ಬರುತ್ತಿರುವ ಜಿಪಿಎಸ್ ಆದ ಅರಣ್ಯವಾಸಿಗಳಿಗೆ ನೀರಾವರಿಗೆ ಸಹಾಯವಾಗಲು ವಿದ್ಯುತ್ ಸಂಪರ್ಕವನ್ನುಕೊಡಲುಎಲ್ಲ ಸಿದ್ದತೆಗಳನ್ನು ನಡೆಸಲಾಗಿದ್ದು, ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ ಎಂದರು

ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ದೇಶದಯಾವೂದೇ ಮೂಲೆಗೆ ತೆರಳಿದರೂ ಸಹ ನಾವೂ ಒಂದಲ್ಲಒAದು ಬುಡಕಟ್ಟುಜನಾಂಗ ಕಂಡುಬರುತ್ತದೆ. ಭಾಷೆ, ಬದುಕು ವಿಭಿನ್ನವಾಗಿದ್ದರೂ ಸಹ ಅವುಗಳಲ್ಲಿ ಸಾಂಸ್ಕೃತಿಕ ಸಾಮ್ಯತೆಕಾಣಬುಹುದಾಗಿದೆ. ಇಂದಿನ ಈ ಕಾರ್ಯಕ್ರಮ ಸಾಂಸ್ಕೃತಿಕ ಕಲೆಗೆ, ಅವುಗಳನ್ನು ಪೋಷಿಸುತ್ತಿರುವಕಲಾವಿದರಿಗೆಒಂದುಗೌರವ ತರುವ ನಿಟ್ಟಿನಲ್ಲಿ ಆಯೋಜಿಸಲಾಗಿದೆಎಂದರು.
ವಾ.ಕ.ರ.ಸಾ.ನಿ. ಅಧ್ಯಕ್ಷವಿ.ಎಸ್. ಪಾಟೀಲ್ ಮಾತನಾಡಿ ಯಾವಧೆ ಇಲಾಖೆಯ ಸಚಿವರಾದರೂ ವಿಭಿನ್ನ ಕಾರ್ಯಗಳ ಮೂಲಕ ಜನಪರಯೋಜನೆಗಳನ್ನು ಜಾರಿಗೆ ತಂದು ತಲುಪಿಸುವದು ಮಹತ್ಕಾರ್ಯವೇ ಸರಿ ಅದರಂತೆ ಸಚಿವ ಸುನೀಲಕುಮಾರರವರು ಬೆಳಕು ಯೋಜನೆಯಿಂದ ಬಡವರ ಪಾಲಿನ ಬೆಳಕಾಗಿದ್ದಾರೆಎಂದರು.
ಪAಚಾಯತ್‌ರಾಜ್ ವಿಕೇಂದ್ರೀಕರಣಯೋಜನೆಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜೀತದಾಳಾಗಿ ಬಂದ ಈ ಸಿದ್ದಿ ಜನರಜೀವನ ಶೈಲಿ ಬೆಳೆಸಿಕೊಂಡು ಬಂದ ವಿಧಾನವೇಎಲ್ಲರಿಗೂ ಪ್ರೇರಕವಾದದ್ದು. ಇಂದು ಸಮಾಜದಎಲ್ಲ ಸ್ಥರಗಳಲ್ಲಿಯೂ ಸಹ ಸಿದ್ದಿ ಜನಾಂಗದವರು ಸಾಧನೆಗೈದಿದ್ದಾರೆ. ಈ ಬುಡಕಟ್ಟುಜನಾಂಗದ ಪ್ರತಿಯೊಂದು ಮನೆಯಲ್ಲಿಯೂ ಸಹ ಜಾನಪದ, ಸಾಂಸ್ಕೃತಿಕ ಸಂಸ್ಕಾರಗಳ ಮೂಲಕ ಜ್ಞಾನವನ್ನು ಬಿತ್ತಲಾಗಿದೆ. ಈ ಜನರು ಸರ್ಕಾರದಎಲ್ಲಅಭಿವೃದ್ಧಿ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಸಮಾಜದಲ್ಲಿಉನ್ನತ ಸ್ಥಾನಕ್ಕೇರಬೇಕುಎಂದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯತ್‌ಅಧ್ಯಕ್ಷೆ ಸುನಂದಾದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ವಾಲ್ಮಿಕಿ ಪ್ರಶಸ್ತಿ ಪುರಸ್ಕ್ರತೆ ಲಕ್ಷ್ಮೀ ಸಿದ್ದಿ, ಕನ್ನಡ ಹಾಗೂ ಸಂಸ್ಕೃತಿಇಲಾಖೆಯ ಅಧಿಕಾರಿ ಎನ್.ಜಿ. ನಾಯಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶೊಬಿನಾ ಕಾಮ್ರೆಕರ್, ಪರಶುರಾಮ ಸಿದ್ದಿ, ಲಕ್ಷ್ಮೀ ಸಿದ್ದಿ, ಶಾರದಾ ಸಿದ್ದಿ ಅವರನ್ನು ಸನ್ಮಾನಿಸಲಾಯಿತು. ಶಿವಲಿಂಗಯ್ಯ ಅಲ್ಲಯ್ಯನವರಮಠಅವರು ವೇದಿಕೆಯಲ್ಲಿದ್ದಗಣ್ಯರಿಗೆ ಭಗವದ್ಗೀತೆ ಪುಸ್ತಕವನ್ನು ನೀಡಿದರು.
ಸಿದ್ದಿ ಕಲಾ ತಂಡಗಳು ಮೆರವಣಿಗೆಯ ಮೂಲಕ ಗಣ್ಯರನ್ನು ವೇದಿಕೆಯತ್ತ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಆರಂಭದಲ್ಲಿ ಸುಶೀಲಾ ಸಿದ್ದಿಯವರು ಯಕ್ಷಗಾನ ಪಾತ್ರಧಾರಿಯಾಗಿ ಸ್ವಾಗತಿಸಿ, ನೃತ್ಯ ಪ್ರದರ್ಶಿಸಿದರು. ಭಾಸ್ಕರ್ ಸಿದ್ದಿ ಸ್ವಾಗತಿಸಿದರು. ಕೇಬಲ್ ನಾಗೇಶ ಹಾಗೂ ವೀಣಾ ಸಿದ್ದಿ ನಿರೂಪಿಸಿದರು. ಕಾರ್ತಿಕ್ ಸಿದ್ದಿ ವಂದಿಸಿದರು.
ಸಭಾಕಾರ್ಯಕ್ರಮದ ನಂತರ ವೇದಿಕೆಯಲ್ಲಿ ೧೩ ಕಲಾ ತಂಡಗಳು ಕಲೆಯನ್ನು ಪ್ರದರ್ಶಿಸಿದರು. ಜೊತೆಗೆಆಯೋಜಿಸಲಾಗಿದ್ದ ಬುಡಕಟ್ಟುಜನಾಂಗದವರುಉಪಯೋಗಿಸುತ್ತಿದ್ದ ಹಳೆಯ ಕಾಲದ ದಿನಬಳಕೆ ವಸ್ತುಗಳ ಪ್ರದರ್ಶನಜನರಗಮನ ಸೆಳೆಯಿತು.
Leave a Comment