
ಯಲ್ಲಾಪುರ: ಪಟ್ಟಣದ ತಿಲಕ ಚೌಕದಲ್ಲಿ ಶ್ರೀರಾಮ ನವಮಿಯನ್ನು ಸಂಭ್ರಮ ಸಡಗರ ದಿಂದ ಆಚರಿಸಲಾಯಿತು. ತಿಲಕ ಬಾಯ್ಸ ಹಾಗೂ ತಿಲಕ ಪರಿವಾರದವರಿಂದ ಬೃಹತ ಶ್ರೀರಾಮ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.ನಂತರ ಕೋಸಂಬರಿ ,ಪಾನಕ ಪ್ರಸಾದ ವಿತರಿಸಿದರು .

ಅಪಾರ ಸಂಖ್ಯೆಯಲ್ಲಿ ಶ್ರೀರಾಮ ಭಕ್ತರು ಆಗಮಿಸಿ ಹಣ್ಣು ಕಾಯಿ ಸಮರ್ಪಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಶಿರೀಶ ಪ್ರಭು, ಲೋಕೇಶ ಬೀಡಿಕರ, , ಅಶೋಕ ಕಿತ್ತೂರ, ಪ್ರಸನ್ನ ಗುಡಿಗಾರ್,ರಜತ ಬದ್ದಿ, ಶಿವಪ್ರಕಾಶ ಕವಳಿ, ಅಮಿತ ಅಂಗಡಿ, ನಮಿತಾ ಬೀಡಿಕರ, ರಾಧಾ ಗುಡಿಗಾರ, ನಂದನ ಬಾಳಗಿ ಸಿದ್ದಾರ್ಥ ನಂದೊಳ್ಳಿ ಮಠ, ಶೋಭಾ ಹುಲಮನಿ, ವೀಣಾ ಯಲ್ಲಾಪುರಕರ, ಮುಂತಾದವರು ಇದ್ದರು.
Leave a Comment