ನವದೆಹಲಿ : (ಪಿಟಿಐ) : ವಿದ್ಯತ್ ಚಾಲಿತ ವಾಹನಗಳ (ಇ.ವಿ.) ರಿಟೇಲ್ ಮಾರಾಟವು 2020 – 21 ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2021-22ನೇ ಹಣಕಾಸು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ.
2020-21 ರಲ್ಲಿ 1.34 ಲಕ್ಷ ವಾಹನಗಳು ಮಾರಾಟ ಆಗಿದ್ದವು. ಈ ಸಂಖ್ಯೆಯು 2021- 22 ರಲ್ಲಿ 4.29 ಲಕ್ಷಕ್ಕೆ ಏರಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟ (ಎಪ್‌ಎಡಿಎ) ತಿಳಿಸಿದೆ.
ವಿದ್ಯತ್ ಚಾಲಿತ ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟ 4,984 ರಿಂದ 17,802 ಕ್ಕೆ ಏರಿಕೆ ಆಗಿದೆ. ದೇಶಿ ಕಂಪನಿಯಾದ ಟಾಟಾ ಮೋಟರ್ಸ್ ವಿದ್ಯತ್ ಚಾಲಿತ ಪ್ರಯಾಣಿಕ ವಾಹನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಇದು ಶೇಕಡ 85.37ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, 15,198 ವಾಹನಗಳನ್ನು ಮಾರಾಟ ಮಾಡಿದೆ. 2020-21 ರಲ್ಲಿ ಒಟ್ಟಾರೆ 3,523 ವಾಹನಗಳನ್ನು ಮಾರಾಟ ಮಾಡಿತ್ತು.
ಎಂ.ಜಿ. ಮೋಟರ್ ಇಂಡಿಯಾ ಕಂಪನಿಯು 2,045 ವಾಹನಗಳನ್ನು ಮಾರಾಟ ಮಾಡಿದ್ದು ಶೇ 11.49 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಮಹೀಂದ್ರ ಮಂತ್ತು ಹುಂಡೈ ಮೋಟರ್ ಕಂಪನಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಮಹೀಂದ್ರ 156 ಮತ್ತು ಹುಂಡೈ 128 ವಾಹನಗಳನ್ನು ಮಾರಾಟ ಮಾಡಿವೆ.
ಇ.ವಿ. ದ್ವಿಚಕ್ರ ವಾಹನ : ದ್ವಿಚಕ್ರ ವಾಹನ ಮಾರಾಟ 41,046 ರಿಂದ 2.31 ಲಕ್ಷಕ್ಕೆ ಭಾರಿ ಏರಿಕೆ ಕಂಡಿದೆ. ಹೀರೂ ಎಲೆಕ್ಟಿçಕ್ ಕಂಪನಿ 65,303 ವಾಹನಗಳನ್ನು ಮಾರಾಟ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ. ಇದರ ಮಾರುಕಟ್ಟೆ ಪಾಲು ಶೇ 28.23 ರಷ್ಟಿದೆ.
ಒಕಿನೋವಾ ಆಟೊಟೆಕ್ ಮತ್ತು ಅಂಪೈರ್ ವಹಿಕಲ್ಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನ ಓಲಾ ಎಲೆಕ್ಟಿçಕ್ 14.371 ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು ಆರನೇ ಸ್ಥಾನದಲ್ಲಿದೆ. ಟಿವಿಎಸ್ ಕಂಪನಿ ಏಳನೇ ಸ್ಥಾನದಲ್ಲಿದೆ. ವಿದ್ಯತ್ ಚಾಲಿತ ವಾಣಿಜ್ಯ ವಾಹನಗಳ ಮಾರಾಟ 400 ರಿಂದ 2,203 ಕ್ಕೆ ಏರಿಕೆ ಆಗಿದೆ ಎಂದು ಎಫ್‌ಎಡಿಎ ಮಾಹಿತಿ ನೀಡಿದೆ.
- ಕ್ಯಾಂಪ್ಕೋ ನೇಮಕಾತಿ|campco new Recruitment 2023
- ಕರ್ನಾಟಕ ಬ್ಯಾಂಕ್ ನೇಮಕಾತಿ|Karnataka Bank Recruitment 2023 Apply for Officer-Law post
- 540 ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ 2023|Forest Guard Recruitment 2023
- Bihar Govt Content writing contest 2023#tourism.bihar.gov.inBihar
- 10th ಆದವರಿಗೆ SSC ಕಾನ್ಸ್ಟೇಬಲ್ (GD) ನೇಮಕಾತಿ 2023-24
Leave a Comment