
ಯಲ್ಲಾಪುರ ; ನಾಮಧಾರಿ ಸಮಾಜದ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಪಟ್ಟಣ ಪಂಚಾಯತ ಸದಸ್ಯ ಸತೀಶ ಶಿವಾನಂದ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಪಟ್ಟಣದ ಕಾಳಮ್ಮನಗರ ಕಾಳಮ್ಮದೇವಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಕಾರ್ಯದರ್ಶಿಯಾಗಿ ಆದರ್ಶ ರಾಮಚಂದ್ರ ನಾಯ್ಕ. ಉಪಾಧ್ಯಕ್ಷರುಗಳಾಗಿ ನವೀನ ಗುಣವಂತ ನಾಯ್ಕ. ವಿನೋದ ಎನ್ ನಾಯ್ಕ, ಮೊಹಿನಿ ಎಸ್ ಪೂಜಾರಿ, ಕಮಲಾಕರ ನಾರಾಯಣ ನಾಯ್ಕ ಆಯ್ಕೆಯಾಗಿದ್ದು, ಸದಸ್ಯರುಗಳಾಗಿ ಪ.ಪಂ ಸದಸ್ಯ ಸೊಮೇಶ್ವರ ಎಮ್ ನಾಯ್ಕ. ಸಮಾಜದ ಪ್ರಮುಖರಾದ ಮಂಜುನಾಥ ಜಿ ನಾಯ್ಕ, ಚಂದನ ಕೇಶವ ನಾಯ್ಕ, ಸತ್ಯಭಾಮಾ ಪಿ ನಾಯ್ಕ, ಮಂಜುನಾಥ ಎಸ್ ನಾಯ್ಕ. ನಿರ್ಮಲಾ ವೆಂಕಟೇಶ ನಾಯ್ಕ, ಪ್ರಭಾಕರ ನಾಯ್ಕ ಮಾವಿನಕಟ್ಟಾ, ರಾಘವೇಂದ್ರ ಎನ್ ಪೂಜಾರಿ, ಗಜಾನನ ನಾಯ್ಕ ತಳ್ಳಿಕೇರಿಯವರನ್ನು ಆಯ್ಕೆ ಮಾಡಲಾಯಿತು.
ಮುಂದಿನ ಮೂರು ವರ್ಷದ ಅವಧಿಗೆ ಆಡಳಿತ ಮಂಡಳಿ ನಾಮಧಾರಿ ಸಮಾಜದ ಅಭಿವೃದ್ಧಿಗೆ ಕಾರ್ಯ ನಿರ್ವಹಿಸಲಿದೆ.
ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಸಮಿತಿ ಸದಸ್ಯರಾದ ಆರ್ ಆಯ್ ನಾಯ್ಕ, ರಾಧಾಕೃಷ್ಣ ನಾಯ್ಕ, ಮೊಹಿನಿ ಪೂಜಾರಿ, ಬಾಲಕೃಷ್ಣ ನಾಯ್ಕ ಅರಬೈಲ್ ಉಪಸ್ಥಿತರಿದ್ದರು.
.
Leave a Comment