ಯಲ್ಲಾಪುರ:ಯಕ್ಷಗಾನ ರಕ್ತಗತವಾಗಿ ಬರುವ ಕಲೆ. ಯಕ್ಷಗಾನ ಕಲೆಯ ಆರಾಧನೆ ದೇವರ ಆರಾಧನೆ ಯ ಪುಣ್ಯದ ಕೆಲಸ. ಯಕ್ಷಗಾನಕ್ಕೆ ಪರಿಶುದ್ಧವಾದ ಕಲೆಯನ್ನು ಗೌರವಿಸುವ ಗುಣದ ಪ್ರೇಕ್ಷಕನಿಂದಲೇ ಯಕ್ಷ ರಂಗ ಉಳಿದಿದೆ. ಎಂದು
ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಕಳಚೆಯ ಶಾಲಾ ಆವಾರದಲ್ಲಿ ದಿ.ಅನಂತ ಭಟ್ಟ ಸೂತ್ರೆಯವರ ಸ್ಮರಣಾರ್ಥ ನಡೆದ ಯಕ್ಷರಾತ್ರಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅರವತ್ತು ವರ್ಷ ತುಂಬಿದ ಜೀವನದಲ್ಲಿ ಕಲಾ ಸಾಧನೆಗಾಗಿ ನೀಡಿದ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು. ಸನ್ಮಾನ ಕಾರ್ಯಕ್ರಮವನ್ನು ಹಿರಿಯ ವೈದಿಕರಾದ ಜಿ ವಿ ಭಟ್ಟ, ಬಾಸಲ್ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಯಕ್ಷಗಾನ ಭಾಗವತ ರವೀಂದ್ರ ಭಟ್ಟ ಅಚವೆ
ಪ್ರಮೋದ ಹೆಬ್ಬಾರ,ರಾಘವೇಂದ್ರ ಬೆಳಸೂರು ಹಾಗೂ ಸೂತ್ರೆಮನೆಯ ಸಹೋದರರು ಉಪಸ್ಥಿತರಿದ್ದರು.
ಸಂಘಟಕ ಶ್ರೀಧರ ಭಟ್ಟ, ಸೂತ್ರೆ ಸ್ವಾಗತಿಸಿದರು.ಶ್ರೀಪಾದ ಗಾಂವ್ಕಾರ ನಿರೂಪಿಸಿದರು. ನಂತರ ಚಂದ್ರಹಾಸ ಚರಿತ್ರೆ ಹಾಗೂ ಗದಾಯುದ್ಧ ಯಕ್ಷಗಾನ ಪ್ರದರ್ಶನ ನಡೆಯಿತು
Leave a Comment