
ಯಲ್ಲಾಪುರ: ನಮ್ಮ ಹಿರಿಯರನ್ನುಸ್ಮರಿಸಲು ಎರಡು ಮಾರ್ಗಗಳಿಗೆ ಒಂದು ಅವರ ಪೂಜೆ, ಭಾವಚಿತ್ರಗಳಿಗೆ ಮೆರವಣಿಗೆಯಿಂದ ಸ್ಮರಿಸುವುದು. ಇನ್ನೊಂದು ಅವರು ಹಾಕಿಕೊಟ್ಟ ಮಾರ್ಗದರ್ಶನ, ಆದರ್ಶ ಪಾಲಿಸುವುದು. ಅವರ ಆದರ್ಶಗಳನ್ನು ನಾವು ಸ್ವಲ್ಪವಾದರೂ ಪಾಲಿಸಿದಾಗ ಮಾತ್ರ ಅವರ ಸ್ಮರಣೆ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದ ಗಾಂಧಿ ಕುಟೀರದಲ್ಲಿರ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ छ ಹಮ್ಮಿಕೊಂಡ ಡಾ.ಅಂಬೇಡ್ಕರ್ ಹಾಗೂ ಜಗಜೀವನರಾಮ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚಾಯತ್ ರಾಜ್ ಹಾಗೂ ವಿಕೇಂದ್ರಿಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿದರು.ಡಾ ನವಿನ ಕುಮಾರ ಉಪನ್ಯಾಸ ನೀಡಿದರು
.ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಉಪಾಧ್ಯಕ್ಷೆ ಶಾಮಿಲಿ ಪಾಠಣಕರ್ ,ತಹಶಿಲ್ದಾರ ಶ್ರೀಕೃಷ್ಣ ಕಾಯ್ಕರ್,ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಜಗಧಿಶ್ ಕಮ್ಮಾರ,ಪ ಪಂ ಮುಖ್ಯಧಿಕಾರಿ ಸಂಗನಬಸಯ್ಯ[ವೈದ್ಯಧಿಕಾರಿ ಡಾ ನರೇಂದ್ರ ಪವಾರ ಸಮಾಜ ಕಲ್ಯಾಣ ಅಧಿಕಾರಿ ಮನೀಶ್ ನಾಯ್ಕ,ವಿವಿಧ ಸಂಘಟನೆಯ ಪ್ರಮುಖ ರಾದ ಜಗನ್ನಾಥ್ ರೇವಣಕ ರ ಭೀಮಶಿ ವಾಲ್ಮೀಖಿ,,ವಿವಿಧ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು .
Leave a Comment