ಯಲ್ಲಾಪುರ : ಅಂಗಾರಕ ಸಂಕಷ್ಟಿಯ ನಿಮಿತ್ತ ತಾಲೂಕಿನ ಸುಪ್ರಸಿದ್ಧ ಚಂದಗುಳಿ ಘಂಟೆ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ದೂರದ ಊರುಗಳಿಂದಲೂ ಆಗಮಿಸಿದ್ದ ಭಕ್ತಾದಿಗಳು ಸೇರಿದಂತೆ ಸಹಸ್ರಾರು ಭಕ್ತರು ಹಣ್ಣು ಕಾಯಿ, ಪಂಚಕಜ್ಜಾಯ, ಗಣಹೋಮ, ಸತ್ಯಗಣಪತಿ ವೃತ, ಸಿಂಧೂರ ಅರ್ಚನೆ ಇತ್ಯಾದಿ ಸೇವೆಯನ್ನು ಸಲ್ಲಿಸಿ, ದೇವರ ದರ್ಶನ ಪಡೆದರು. ಯಲ್ಲಾಪುರ ಪಟ್ಟಣದಿಂದ ತಾಲೂಕಿನ ಚಂದಗುಳಿ ಗಂಟೆಗಣಪತಿ ದೇವಾಲಯದವರೆಗೆ ಚಂದಗುಳಿ ಗೆಳೆಯರ ಬಳಗದ ಭಕ್ತರು ಪಾದಯಾತ್ರೆ ನಡೆಸಿದರು. 15ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಸಾಗಿ, ಗಂಟೆಗಣಪತಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು.
Leave a Comment