ಯಲ್ಲಾಪುರ: ಅರಣ್ಯ ದಲ್ಲಿ ಮೇಯಲು ಬಿಟ್ಟ ಆಕಳಿನ ಮೇಲೆ ಯಾರೋ ದುಷ್ಕರ್ಮಿಗಳು ಗುಂಡೇಟು ಹಾಕಿದ್ದು, ಆಕಳು ಗಂಭೀರವಾಗಿ ಗಾಯಗೊಂಡಿದೆ. ಪ್ರಾಣಾಪಾಯದಿಂದ ಪಾರಾಗಿದೆ.
ಈ ಭಾಗದಲ್ಲಿ ಬೇಟೆಗಾರರ ಹಾವಳಿ ಮತ್ತೆ ಹೆಚ್ಚಿರುವ ಅನುಮಾನ ಮೂಡಿದ್ದು, ಬಿಸಗೋಡು ರಸ್ತೆಯಲ್ಲಿ ಕಳೆದ ವಾರ ಚಿರತೆಯೊಂದನ್ನು ಗುಂಡಿಗೆ ಬಲಿಯಾಗಿತ್ತು.
ಪಟ್ಟಣದ ರಾಮಾಪುರದ ಪಾಂಡುರಂಗ ಪಂಡರಾಪುರ ಎಂಬುವವರ ಆಕಳನ್ನು ಮೇಯಲು ಕಾಡಿನಲ್ಲಿ ಬಿಟ್ಟಿದ್ದರು. ಕಾಡಿನಲ್ಲಿ ದುಷ್ಕರ್ಮಿಗಳು ಹಾರಿಸಿದ ಗುಂಡೇಟು ಅಕಳಿಗೆ ತಗುಲಿದೆ.
ನೋವಿನಿಂದ, ರಕ್ತ ಸುರಿಸುತ್ತಾ ಮನೆಗೆ ಬಂದ ಅದನ್ನು ಕಂಡು ಮನೆ ಮಂದಿ ಹೌಹಾರಿದರು. ಆಕಳು ಬಂದ ದಾರಿಯುದ್ದಕ್ಕೂ ಮನೆ ಮಂದಿ ಸಾಗಿದಾಗ, ಕಾಡಿನವರೆಗೂ ರಕ್ತ ಚೆಲ್ಲಿದ್ದು ಕಂಡು ಬಂದಿದೆ.ತಕ್ಷಣ ಪಶು ವೈದ್ಯಾಧಿಕಾರಿ ಡಾ.ಸುಬ್ರಾಯ ಭಟ್ಕ ಅವರನ್ನು ಕರೆಯಿಸಿ ಅಕಳಿಗೆ ಚಿಕಿತ್ಸೆ ಕೊಡಿಸಿದ್ದಾರೆ .
ಆಕಳು ತುಸು ಚೇತರಿಸಿಕೊ೦ಡಿದ್ದು, ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದೆ.ಈ ಪ್ರಕರಣ ಸಂಬಂಧ ಯಲ್ಲಾಪುರ ಠಾಣೆ ಪೊಲೀಸರಿಗೆ ಪಾಂಡುರಂಗ ದೂರು ನೀಡಿದ್ದಾರೆ.
- ಸೀಗಡಿ ಕೃಷಿ ಸ್ಥಗಿತ ಗೊಳಿಸಲು ಮೀನುಗಾರರ ಆಗ್ರಹ
- ಬೋನಿಗೆ ಬಿದ್ದ ಚಿರತೆ
- ದಾಲ್ಚಿನ್ನಿ ಕೃಷಿ ಅನುಭವ
- ಜ19 ರ ಬೆಳಿಗ್ಗೆ 6 ಗಂಟೆಯಿಂದ ಜ. 20 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ
- ಡಾ.ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಅರ್ಜಿ ಆಹ್ವಾನ 2025-26
Leave a Comment