
ಯಲ್ಲಾಪುರ: ಪಟ್ಟಣದ ಕಾಳಮ್ಮಾನಗರ ಪ್ರೌಢಶಾಲೆಯಲ್ಲಿ ತಾಲೂಕಾ ಕಾನೂನು ಸೇವಾ ಸಮೀತಿ,ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹೆಣ್ಣುಮಕ್ಕಳ ದಿನಾಚರಣೆಯ ನಡೆಯಿತು.
ತಾ.ಪಂ.ಸಿಇಒ ಜಗದೀಶ ಕಮ್ಮಾರ ಕಾರ್ಯಕ್ರಮ ಉದ್ಘಾಟಿಸಿ,”ಹೆಣ್ಣು ಮಗುವು ಪುರುಷರಂತೆ ಸರಿ ಸಮಾನಳಾಗಿ ಬದುಕುವ ಹಕ್ಕು ಮತ್ತು ಅರ್ಹತೆ ಹೊಂದಿದ್ದಾಳೆ.,ಈ ಬಗ್ಗೆ ಜಾಗ್ರತಿ ಹೆಚ್ಚಿಸುವ ಸಲುವಾಗಿ,ಹೆಣ್ಣು ಮಗುವಿನ ದಿನಾಚರಣೆ ಆಚರಿಸಲಾಗುತ್ತಿದೆ.ಜತೆಗೆ ಹೆಣ್ಣು ಮಗುವು ಎದುರಿಸುತ್ತಿರುವ ಸಮಸ್ಯೆ ಸವಾಲುಗಳ ಕುರಿತು ಕಾನೂನು ಅರಿವು ಮೂಡಿಸಲಾಗುತ್ತಿದೆ” ಎಂದರು.
ತಹಶಿಲ್ದಾರ ಶ್ರೀಕೃಷ್ಣ ಕಾಮ್ಕರ್ ಅಧ್ಯಕ್ಷತೆ ವಹಿಸಿ ಹೆಣ್ಣು ಮಗುವನ್ನು ಉಳಿಸಿ,ಓದಿಸಿ ಪ್ರಜ್ಞಾವಂತಳನ್ನಾಗಿ ಮಾಡುವದಕ್ಕೆ ನಮ್ಮ ಆದ್ಯತೆ ನೀಡಬೇಕು ಎಂದರು.
ಫೋಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕುರಿತು ನ್ಯಾಯವಾದಿ ಎನ್.ಟಿ.ಗಾಂವ್ಕಾರ ಉಪನ್ಯಾಸ ನೀಡಿದರು.
ಲೀಗಲ್ ಏಡ್ ಪ್ಯಾನಲ್ ವಕೀಲೆ ಬೇಬಿ ಅಮಿನಾ ಶೇಖ್,ಬಿಇಒ ಎನ್.ಆರ್.ಹೆಗಡೆ, ಮಾತನಾಡಿದರು.
Leave a Comment