ಯಲ್ಲಾಪುರ : ವಸತಿ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ಸೂರು ನೀಡುವ ಉದ್ದೇಶದಿಂದ ಪಟ್ಟಣದ ಮಂಜುನಾಥ ನಗರದಲ್ಲಿ ನಿರ್ಮಾಣವಾಗುತ್ತಿರುವ ಜೀ ಪ್ಲಸ್ ಟೂ ಮಾದರಿಯ ಆಶ್ರಯ ಮನೆಗಳ ನಿರ್ಮಾಣದ ಕುರಿತಂತೆ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.
ಜೀ ಪ್ಲಸ್ ಟೂ ಮಾದರಿಯ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯ ನೀಲನಕ್ಷೆಯನ್ನು ವೀಕ್ಷಿಸಿದ ಸಚಿವರು ನಿರ್ಮಾಣದ ಹೊಣೆಹೊತ್ತಿರುವ ಗುತ್ತಿಗೆದಾರರು, ಪಟ್ಟಣ ಪಂಚಾಯತ ಅಧಿಕಾರಿಗಳೊಂದಿಗೆ ಮನೆಗಳ ನಿರ್ಮಾಣದ ರೂಪುರೇಷೆಗಳ ಕುರಿತು ವಿಸ್ತೃತವಾಗಿ ಚರ್ಚಿಸಿ ಅಗತ್ಯ ಸಲಹೆಸೂಚನೆಗಳನ್ನು ನೀಡಿದರು.
ಈ ಸಭೆಯಲ್ಲಿ ಪ.ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ್, ಉಪಾಧ್ಯಕ್ಷರಾದ ಶ್ಯಾಮಿಲಿ ಪಾಟಣಕರ್, ಪಟ್ಟಣ ಪಂಚಾಯತ ಅಧಿಕಾರಿ ಸಂಗನ ಬಸಯ್ಯ ಹಾಗೂ ನಿರ್ಮಾಣ ಹೊಣೆಹೊತ್ತಿರುವ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment