ಯಲ್ಲಾಪುರ:ರೈತರ ನೆರವಿಗೆ ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಶ್ರೀದೇವಿ ರೈತ ಉತ್ಪಾದಕರ ಸಂಸ್ಥೆಯು ನೆರವಾಗಲಿದ್ದು ಕೃಷಿಕರ ಮನೆ ಬಾಗಿಲಿಗೆ ಸೇವೆಯನ್ನು ನೀಡಲಿದೆ. . ಎಂದು ಸಂಸ್ಥೆಯ ನಿರ್ದೇಶಕಗಜಾನನ ಭಟ್ಟ, ಕಳಚೆ ಹೇಳಿದರು.ಅವರು ವಜ್ರಳ್ಳಿಯ ಗ್ರಾಮ ಪಂಚಾಯತ ಸಭಾಭವನದಲ್ಲಿ ಯಲ್ಲಾಪುರ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಮತ್ತು ಶ್ರೀದೇವಿ ರೈತ ಉತ್ಪಾದಕರ ಕಂಪನಿ ಕಳಚೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತೋಟಗಾರಿಕೆ ಇಲಾಖೆಯಲ್ಲಿರುವ ಯೋಜನೆಗಳು ಮತ್ತು ರೈತ ಉತ್ಪಾದಕರ ಸಂಸ್ಥೆಯ ಕುರಿತು ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ .ಮಾತನಾಡಿ ರೈತರ ಒಕ್ಕೂಟವು ಕಂಪನಿಯ ಕಾಯಿದೆಯ ಅಡಿಯಲ್ಲಿ ಬರುವುದರಿಂದ ಸರ್ಕಾರೇತರ ಸಂಸ್ಥೆಯಾಗಿ ಬೆಳೆಯಲಿದೆ ಎಂದರು.
ಸಂಘದ ಶೇರನ್ನು ಕಂಪನಿ ಮೂಲಕ ರೈತರು ತೊಡಗಿಸಿದ ಹಣವು ಕಂಪನಿಯ ಲಾಭಾಂಶವು ರೈತರಿಗೆ ನೇರವಾಗಿ ಸಿಗಲಿದೆ. ಹೆಚ್ಚಿನ ನಷ್ಟವನ್ನು ರೈತರ ಮೇಲೆ ಹೊರಿಸದೇ ಕೇವಲ ನಿರ್ದೇಶಕರು ಮಾತ್ರ ಭರಿಸಬೇಕು.
ಮುಂದಿನ ದಿನಗಳಲ್ಲಿ ತೋಟಗಾರಿಕೆ ಇಲಾಖೆ ಯ ಯೋಜನೆಯ ಸಹಾಯಧನದ ಲಾಭ ಪಡೆದುಕೊಳ್ಳಬೇಕೆಂದರೆ ರೈತ ಉತ್ಪಾದಕರ ಸಂಸ್ಥೆಯ ಸದಸ್ಯರಾಗಬೇಕು ಎಂದರು
ಸಭೆಯ ಅಧ್ಯಕ್ಷೆತೆವಹಿಸಿದ್ದ ಶ್ರೀದೇವಿ ರೈತ ಉತ್ಪಾದಕರ ಕಂಪನಿ ಯ ಅಧ್ಯಕ್ಷಸುಬ್ರಹ್ಮಣ್ಯ ಬಾಗಿನಕಟ್ಟಾ ರೈತರ ಸಲಹೆ ಸೂಚನೆಯೊಂದಿಗೆ ಸಂಸ್ಥೆಯನ್ನು ಬೆಳಸಬೇಕಿದೆ. ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಎಂದರು.
ಅತಿಥಿಗಳಾಗಿ ಗ್ರಾಮ ಪಂಚಾಯತ ಉಪಾಧ್ಯಕ್ಷ ರತ್ನಾ ಬಾಂದೇಕರ್ ಉಪಸ್ಥಿತರಿದ್ದರು.
ಮಾಹಿತಿ ಶಿಬಿರದಲ್ಲಿ ತೋಟಗಾರಿಕೆ ಇಲಾಖೆ ಯ ಅಧಿಕಾರಿಗಳಾದ ವೇದಾವತಿ ನಾಯ್ಕ,ಹೀನಾ ಅಬ್ಧುಲ್ ಗನಿ, ಕೀರ್ತಿ ಮಲಮರಡಿ ಉಪಸ್ಥಿತರಿದ್ದರು.
Leave a Comment