ಯಲ್ಲಾಪುರ : ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ಜಿ ಪ್ಲಸ್-2 ಮಾದರಿಯ ವಸತಿಗೃಹಗಳಿಗೆ ಮುಂಗಡ ಹಣ ಪಾವತಿ ಮಾಡಲು ಮೆ.10 ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ತಿಳಿಸಿದ್ದಾರೆ.
ಜಿ ಪ್ಲಸ್-2 ಮಾದರಿಯ ವಸತಿಗೃಹಗಳಿಗೆ ಮುಂಗಡ ಹಣ 50 ಸಾವಿರ ರೂಗಳನ್ನು ಡಿ.ಡಿ. ರೂಪದಲ್ಲಿ ಪಾವತಿಸಲು ಏ.20 ರ ವರೆಗೆ ಸಮಯ ನೀಡಲಾಗಿತ್ತು. ಆದರೆ ಬ್ಯಾಂಕ್‌ಗಳಲ್ಲಾದ ತಾಂತ್ರಿಕ ಕಾರಣಗಳಿಂದ ಅನೇಕ ಫಲಾನುಭವಿಗಳಿಗೆ ಡಿಡಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ ಅವರೊಂದಿಗೆ ಚರ್ಚಿಸಿದಾಗ, ತಾಂತ್ರಿಕ ಕಾರಣಗಳನ್ನು ಬಗೆಹರಿಸಿ ಮೆ.10 ರ ವರೆಗೆ ಕಾಲಾವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಫಲಾನುಭವಿಗಳು ಆದಷ್ಟು ಬೇಗ ಡಿಡಿ ಪಾವತಿಸಿಬೇಕು ಎಂದರು.
ಹಾಗೂ , ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿ
ತಾಂತ್ರಿಕ ಕಾರಣಗಳಿಂದಾಗಿ ಡಿಡಿ ಪಾವತಿಸಲು ಫಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು. ಇದರಿಂದ ಮನೆ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಗುತ್ತಿರುವುದನ್ನು ಗಮನಿಸಿದ ಸಚಿವರಾದ ಶಿವರಾಮ ಹೆಬ್ಬಾರ್ ಅವರು ತಾಂತ್ರಿಕ ಸಮಸ್ಯೆಗೆ ಪರಿಹಾರ ಕಲ್ಪಿಸಿ, ಸಮಯವನ್ನು ಮೆ.10 ರ ವರೆಗೆ ವಿಸ್ತರಿಸಿದ್ದಾರೆ. ಯಲ್ಲಾಪುರದ ಜನತೆ ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಕನಸಿನ ಮನೆಯನ್ನು ಪಡೆದುಕೊಳ್ಳಬೇಕು.ಎಂದಿದ್ದಾರೆ
–
Leave a Comment