
ಯಲ್ಲಾಪುರ;
ವಾಹನ ಸವಾರರು ಅಥವಾ ಮಾಲಕರು ವಾಹನದ ವಿಮೆಯನ್ನು ಕಾಲಕಾಲಕ್ಕೆ ನವೀಕರಿಸಿಕೊಂಡಿರ ಬೇಕಾಗಿರುವುದು ತೀರಾ ಅಗತ್ಯವಾಗಿದೆ ಎಂದು
ನ್ಯೂ ಇಂಡಿಯಾ ಅಶುರೆನ್ಸಿಯ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಶಶಿಕಾಂತ ಹಲಗೇಕರ್ ಹೇಳಿದರು.
ಅವರು ಪಟ್ಟಣದ ನಾಯಕನಕೆರೆಯ ಶ್ರೀಕೃಷ್ಣ ರೆಸೋಯ್ ಸಭಾಭವನದಲ್ಲಿ
ದಿ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ ಲಿ. ಧಾರವಾಡ ವಿಭಾಗ ಶಿರಸಿ ಹಾಗೂ ಶ್ರೀಮಹತಿ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಯಲ್ಲಾಪುರ ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನಿಭವಿಗೆ ಪಾಕ್ಲೇಮ್ ವಿತರಿಸಿ ಮಾತನಾಡಿ,ವಾಹನ ವಿಮೆಯ ಮಹತ್ವ,ಅಗತ್ಯತೆಯ ಬಗೆಗೆ ವಿವರಿಸಿದರು. ನಂತರ ಗ್ರಾಹಕರೊಂದಿಗೆ ಸಂವಾದ ನಡೆಸಿ ಅಗತ್ಯ ಮಾಹಿತಿಯನ್ನು ವಿವರವಾಗಿ ನೀಡಿ,ಸಂದೇಹಗಳನ್ನು ಬಗೆ ಹರಿಸಿದರು.
ಇತ್ತೀಚಿಗೆ ರಸ್ತೆ ಅಫಘಾತದಲ್ಲಿ ಮೃತ ಪಟ್ಟ ಬೈಕ್ ಸವಾರ ತಾಲೂಕಿನ ವಜ್ರಳ್ಳಿ ನಿವಾಸಿ ಸುರೇಂದ್ರ ರಾಮಯ್ಯ ಶೇರುಗಾರ ಅವರ ಕುಟುಂಬಕ್ಕೆ ೧೫ ಲಕ್ಷರೂ ಪರಿಹಾರ ಚಕ್ ನ್ನು ಅವರ ಸಹೋದರ ನರೇಶ ಶೇರುಗಾರ ಅವರಿಗೆ ನೀಡಿದರು.
ಡಿವಿಜನಲ್ ಮ್ಯಾನೇಜರ್ ಪ್ರಮೋದ ನಾಯಕ,ಶಿರಸಿ ಶಾಖೆಯ ವಿನಾಯಕ ಆವಾರಿ, ಯಲ್ಲಾಪುರ ತಾಲೂಕಾ ಲಾರಿ ಮಾಲಕರ ಸಂಘದ ಅಧ್ಯಕ್ಷ ನಾಗೇಂದ್ರ ಕವಾಳೆ,ಮಹತಿ ವಾಯುಮಾಲಿನ್ಯ ಕೇಂದ್ರದ ಮುಖ್ಯಸ್ಥ ಮಂಜುನಾಥ ಕೋಮಾರ ಬೀಗಾರ,ಉಪಸ್ಥಿತರಿದ್ದರು. ಶ್ರುತಿ ಕೋಮಾರ ಸ್ವಾಗತಿಸಿ ನಿರೂಪಿಸಿದರು.
Leave a Comment