ಯಲ್ಲಾಪುರ : ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ನೂತನ ಬ್ಲಡ್ ಬ್ಯಾಂಕ್ ಘಟಕವನ್ನು ಉದ್ಘಾಟಿಸಿದರು.
ವ್ಯಕ್ತಿಯ ಆರೋಗ್ಯ ಕಾಪಾಡುವುದಕ್ಕೆ ತುರ್ತು ಸಂದರ್ಭ ರಕ್ತದ ಅವಶ್ಯಕತೆ ಇದೆ, ಅದು ಕೃತಕ ಉತ್ಪಾದನೆ ಸಾಧ್ಯವಿಲ್ಲದ ಕಾರಣಕ್ಕೆ ರಕ್ತದಾನಿಗಳಿಂದಲೇ ಸಂಗ್ರಹಿಸಬೇಕು ಇದಕ್ಕಾಗಿ ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡುವುದಕ್ಕೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಧಿಕಾರಿ ಡಾ.ನರೇಂದ್ರ ಪವಾರ, ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುನಂದಾ ದಾಸ್, ಉಪಾಧ್ಯಕ್ಷರಾದ ಶ್ಯಾಮಿಲಿ ಪಾಟಣಕರ್ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment