
ಯಲ್ಲಾಪುರ: ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ಶತಚಂಡಿ ಹವನ ಕಾರ್ಯಕ್ರಮ ನಡೆಯಿತು.
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಕಲಾವೃದ್ಧಿಹವನ, ಸರಸ್ವತಿ ಮೂಲಮಂತ್ರ ಹವನ, ನಡೆದವು. ಪೂರ್ಣಾಹುತಿ, ಮಹಾಪೂಜೆ, ಸುಹಾಸಿನಿ ಪೂಜೆ, ಕುಮಾರಿಕಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ವೇ.ಶಂಕರ ಭಟ್ಟ ಕಟ್ಟೆಯವರ ಆಚಾರ್ಯತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವೇ.ಗೋಪಾಲಕೃಷ್ಣ ಭಟ್ಟ ಯಜಮಾನತ್ವ ವಹಿಸಿದ್ದರು.
ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಕೆ.ಭಟ್ಟ, ಪ್ರಮುಖರಾದ ಜಗದೀಶ ದೀಕ್ಷಿತ್,ನಾಗೇಂದ್ರ ಭಟ್ಟ,ನರಸಿಂಹ ಭಟ್ಟ ಗೇರಗದ್ದೆ, ಜಿ.ಎನ್.ಭಟ್ ತಟ್ಟಿಗದ್ದೆ,ರಮಾ ದೀಕ್ಷಿತ್, ವಿಶ್ವನಾಥ ಭಟ್ಟ ಶೀರ್ಲೆ, ಶಿವರಾಮ ಭಟ್ಟ ಇತರರಿದ್ದರು
Leave a Comment