
ಯಲ್ಲಾಪುರ: ಪಟ್ಟಣದ ವೀರಶೈವ-ಲಿಂಗಾಯತ ಸಮುದಾಯದವರಿಂದ ಬಸವ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಿದರು. ಮಂಗಳವಾರ ಸಂಜೆ ವೀರಭದ್ರ ದೇವಸ್ಥಾನದಲ್ಲಿ ಅಕ್ಕನ ಬಳಗದವರಿಂದ ತೊಟ್ಟಿಲು ಪೂಜೆ ಬಸವೇಶ್ವರ ನಾಮಕರಣ ಕಾರ್ಯಕ್ರಮ ನಡೆಯಿತು.ನಂತರ ಬಸವೇಶ್ವರ ಭಾವಚಿತ್ರ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಮೆರವಣಿಗೆ ಸಂಪನ್ನಗೊAಡಿತು.

ವೀರಭದ್ರೆಶ್ವರ ಭಜನಾ ತಂಡದವರಿAದ ಭಜನೆ ,ಶ್ರೀದೇವರಿಗೆ ವಿಶೇಷ ಪೂಜೆ ನಡೆಯಿತು. ಪ್ರಮುಖರಾದ ಬಸವರಾಜ ಗೌಳಿ, ಮಹೇಶ ಗೌಳಿ , ರುದ್ರಪ್ಪ ಜೋಗಾರಶೆಟ್ಟರ, ಮಂಜುನಾಥ ಜೋಗಾರಶೆಟ್ಟರ,ಶಿವಯ್ಯಾ ಹಿರೇಮಠ, ಉದಯ ಜಾಲಿಹಾಳ, ಮಲ್ಲಯ್ಯ ಹಿರೇಮಠ,ರಾಜು ನಂದೊಳ್ಳಿಮಠ,ಚನ್ನವೀರಯ್ಯಾ ಪಾಟೀಲ,ವೀರಣ್ಣ ಅಂಗಡಿ,ವಿರುಪಾಕ್ಷ ಪಾಟೀಲ,ರುದ್ರಯ್ಯಾ ಮಗದೂರಮಠ, ಅಕ್ಕನಬಳಗದ ಪುಷ್ಪಾ ಜೋಗಾರಶೆಟ್ಟರ, ರತ್ನಾಪಾಟೀಲ,ಶಶಿಕಲಾ ಹಿರೇಮಠ, ಗೌರಿ ನಂದೊಳ್ಳಿಮಠ, ರೇಣುಕಾ ಹೀರೆಮಠ,ಸುವರ್ಣ ಹಿರೇಮಠ, ಸವಿತಾ ಕವಳಿ, ಸುಮಂಗಲಾ ಮುಂತಾದವರು ಇದ್ದರು.
Leave a Comment