ಯಲ್ಲಾಪುರ :ಪಟ್ಟಣದ ಮುಸ್ಲಿಂಸಮುದಾಯzವÀರು ರಮಜಾನ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರ ಸಂಭ್ರಮದಿAದ ಆಚರಿಸಿದರು.
ಪಟ್ಟಣದ ಎಲ್ಲಾ ಮುಸ್ಲಿಂ ಬಾಂಧವರು ಶುಭ್ರವಸ್ತ್ರದಾರಿಗಳಾಗಿ ರಾಷ್ಟ್ರೀಯ ಹೆದ್ದಾರಿ ೬೩ ಸಬಗೇರಿಯ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಪಟ್ಟಣದ ಇಸ್ಲಾಂ ಗಲ್ಲಿಯ ಮಹಮ್ಮದೀಯ ಮಸೀದಿ ಹಾಗೂ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಮುಸ್ಲಿಂ ಬಾಂಧವರು ಒಬ್ಬರಿಗೊಬ್ಬರು ಆಲಿಂಗಿಸಿ ,.
ಹಾಗೂ ತಮ್ಮ ಮನೆಯ ಅಕ್ಕ ಪಕ್ಕ ಹಿಂದೂ ಮನೆಯವರಿಗೆ , ಸ್ನೇಹಿತರಿಗೆ ಸುರಕೂರ್ಮಾ (ಶ್ಯಾವಿಗೆಯಿಂದ ಮಾಡಿದ ಸಿಹಿ ಪದಾರ್ಥ) ನೀಡಿ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು ತಾಲೂಕಿನ ಕಿರವತ್ತಿ, ಮಂಚಿಕೇರಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಕೂಡ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ರಂಜಾನ್ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು.
Leave a Comment