
ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜನೆಗೊಂಡ ಮಕ್ಕಳ ಬೇಸಿಗೆ ಶಿಬಿರಕಾರ್ಯಕ್ರಮ ದಲ್ಲಿ ಪಪಂ ಅಧ್ಯಕ್ಷೆ ಸುನಂದ ದಾಸ್ ಮಾತನಾಡಿ ನಾವು ಸಣ್ಣವರಾಗಿದ್ದಾಗ ಶಾಲೆಯ ಬಿಡುವು ದೊರಕಿತೆಂದರೆ, ಬೇಸಿಗೆಯ ಬಿರು ಬಿಸಿಲನ್ನು ಲಕ್ಷಿಸದೆ ಸಂಬAಧಿಕರ ಮನೆಗಳ ಭೇಟಿ: ನದಿ, ಹಳ್ಳ, ಕೊಳ್ಳಗಳಲ್ಲಿ ಆಟವಾಡುತ್ತಿದ್ದೆವು.

ಆಗ ಪಾಠದೊಂದಿಗೆ ಬಾಹ್ಯ ಪ್ರಪಂಚದ, ಪರಿಸರದ ಕುರಿತು ತಿಳಿವಳಿಕೆ ದೊರಕುತಿತ್ತು ಎಂದರು. ಆದರೆ ಬದಲಾದ ಕಾಲಘಟ್ಟದಲ್ಲಿ ಮಕ್ಕಳಿಗೆ ಬೇಸಿಗೆ ರಜೆಯ ಪ್ರಮಾಣವೂ ಕಡಿಮೆಯಾಗಿದ್ದು, ಮೊಬೈಲ್ ಮಾತ್ರವೇ ಸರ್ವಸ್ವವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಆಕರ್ಷಣೆಯಿಂದ ಹೊರಬಂದು ಸಹಪಾಠಿಗಳೊಂದಿಗೆ ಬೆರೆತು ಅಗತ್ಯ ವಿಚಾರಗಳನ್ನು ತಿಳಿದುಕೊಳ್ಳುವುದು ಒಳಿತು. ಇಂತಹ ಬೇಸಿಗೆ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯದ ಅರಿವು ಸಾಧ್ಯ ಎಂದು ಹೇಳಿದರು.ಶಿಬಿರದಲ್ಲಿ ಚಿತ್ರಕಲೆ, ಆಟೋಪಕರಣಗಳ ತಯಾರಿಕೆ, ಶ್ಲೋಕಗಳ ಕಲಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅರಿವು ಉಪನ್ಯಾಸ, ನಿಸರ್ಗ ತಾಣಗಳಿಗೆ ಭೇಟಿ ಇನ್ನಿತರ ವಿಶೇಷತೆಗಳನ್ನು ಕಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಫೀಕಾ ಹಳ್ಳೂರ್ ವಿವರಿಸಿದರು.ತಾಪಂ ಇಒ ಜಗದೀಶ ಕಮ್ಮಾರ, ಮುಂಡಗೋಡ ಶಿಕ್ಷಣಾಧಿಕಾರಿ ವಿ.ಎಸ್. ಪಟಗಾರ, ಯಲ್ಲಾಪುರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಶಿಬಿರದ ಮಹತ್ವ ತಿಳಿಸಿದರು.ಶಾಲೆಯ ಸಹ ಶಿಕ್ಷಕ ಶ್ರೀಧರ ಹೆಗಡೆ ಇನ್ನಿತರ ಅಧಿಕಾರಿಗಳು, ಪಾಲಕರು ಉಪಸ್ಥಿತರಿದ್ದರು.ರಂಜಿತಾ ಮರಾಠಿ ಪ್ರಾರ್ಥಿಸಿದರು. ಪುಷ್ಪಾ ಹಂಜಾಯಿ ನಿರ್ವಹಿಸಿದರು. ಫಾತಿಮಾ ವಂದಿಸಿದರು.
Leave a Comment