ಹಣ,ಬಂಗಾರ, ವಾಹನಗಳ ಕಳ್ಳತನ ಮಾಡುವುದನ್ನು ನೋಡಿದ್ದೀರಿ, ಆದರೆ ತಾಲೂಕಿನ ಮಾವನೂರು ಗ್ರಾಮದ ಜಮೀನಿನಲ್ಲಿ 8.80 ಲಕ್ಷ ಮೌಲ್ಯದ ಮಣ್ಣು ಕಳ್ಳತನ ಮಾಡಿರುವ ಅರೋಪದ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾವನೂರು ಗ್ರಾಮದ 2 ಎಕರೆ 6 ಗುಂಟೆ ಜಮೀನದಲ್ಲಿ ತಿಮ್ಮಸಾಗರದ ಆರೋಪಿತ ಚನ್ನಪ್ಪ ಕನಕಣ್ಣವರ ಸೇರಿ 8-10 ಜನರು ಫಲವತ್ತಾದ ಮಣ್ಣುನ್ನು 2 ಜೆಸಿಬಿ, ಐದಾರು ಲಾರಿಗಳ ಮೂಲಕ ಲೋಡ್ ಮಾಡಿದಲ್ಲದೆ, ಸುಮಾರು 300 ಟ್ರಿಪ್ ಮಣ್ಣನ್ನು ಕಳ್ಳತ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದ್ಯಾಮಣ್ಣ ಎಂಬುವರು ದೂರು ದಾಖಲಿಸಿದ್ದಾರೆ.
Leave a Comment