ಯಲ್ಲಾಪುರ : ಇ-ಸ್ವತ್ತು ವಿತರಣೆ ಸಂಬಂಧ ಆಗಿರುವ ಸಮಸ್ಯೆಯ ಕುರಿತು ಚರ್ಚಿಸಿ ಸಮಸ್ಯೆ ಬಗೆಹರಿಸಲು ‘ಇ-ಸ್ವತ್ತು ಮತ್ತು ನಗರ ಪ್ರದೇಶಗಳ ಇ-ಖಾತಾ ಸಚಿವ ಸಂಪುಟದ ಉಪಸಮಿತಿಯ ಸಭೆ ಬುಧವಾರ ವಿಧಾನ ಸೌಧದ 313 ಕೊಠಡಿಯಲ್ಲಿ ಜರುಗಿತು.
![ಇ-ಖಾತಾ ಸಚಿವ ಸಂಪುಟದ ಉಪಸಮಿತಿಯ ಸಭೆಯಲ್ಲಿ ಸಚಿವ ಹೆಬ್ಬಾರ್ ಭಾಗಿ 1 IMG 20220511 WA0065](https://i0.wp.com/canarabuzz.com/wp-content/uploads/2022/05/IMG-20220511-WA0065.jpg?resize=1280%2C577&ssl=1)
ಯಲ್ಲಾಪುರ :ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಉತ್ತರ ಕನ್ನಡ ಜಿಲ್ಲೆಯ ಇ-ಸ್ವತ್ತು ವಿತರಣೆಯಲ್ಲಾಗುತ್ತಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಫಾರ್ಮ್ ನಂ 9 ಮತ್ತು 11ಎ ಹಾಗೂ 9 ಮತ್ತು 11ಬಿ ವಿತರಣೆಯಲ್ಲಾಗುತ್ತಿರುವ ಗೊಂದಲಗಳ ಬಗ್ಗೆ ಸಭೆಯ ಗಮನ ಸೆಳೆದರು.
![ಇ-ಖಾತಾ ಸಚಿವ ಸಂಪುಟದ ಉಪಸಮಿತಿಯ ಸಭೆಯಲ್ಲಿ ಸಚಿವ ಹೆಬ್ಬಾರ್ ಭಾಗಿ 2 IMG 20220511 WA0064](https://i0.wp.com/canarabuzz.com/wp-content/uploads/2022/05/IMG-20220511-WA0064.jpg?resize=1280%2C577&ssl=1)
2013ರ ಕ್ಕಿಂತ ಹಿಂದೆ ಇರುವ ಆಸ್ತಿಗಳಿಗೆ ಈಗಾಗಲೇ ಅಲ್ಲಿ ಖಾತೆ ಆಗಿರುವಂತಹ ಪ್ರಕರಣಗಳು ಕೂಡ ವಿಭಾಗ ಮಾಡಲು ಆಗುತ್ತಿರುವ ತೊಂದರೆಗಳ ಬಗ್ಗೆ ಸಚಿವರು ಸಭೆಯಲ್ಲಿ ವಿವರಿಸಿದರು. ಟೌನ್ ಮತ್ತು ಕಂಟ್ರೀ ಪ್ಲಾನ್ ಎಕ್ಟ್ ನಿಂದಾಗಿ ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ಒಂದು ಮನೆ ಕಟ್ಟಿಕೊಳ್ಳುವವರಿಗೆ ಹಾಗೂ ಎನ್‌ಪಿಎ ಹೊರಗಡೆ ಇರುವ ಪ್ರದೇಶದವರಿಗೂ ಕೂಡ ಸಾಕಷ್ಟು ತೊಂದರೆಯಾಗುತ್ತಿದೆ. ಉತ್ತರ ಕನ್ನಡದ ಹಳ್ಳಿಗಾಡಿನಲ್ಲಿ ತಮ್ಮದೇ ಪ್ರದೇಶದಲ್ಲಿ ಒಂದೊಂದು ಮನೆ ಕಟ್ಟಲು ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದ ಸಚಿವರು, ನಿಯಮಗಳನ್ನು ಸರಳಿಕರಣ ಮಾಡಬೇಕು ಎಂದು ಆಗ್ರಹಿಸಿದರು.
ಸಚಿವ ಸಂಪುಟ ಉಪಸಮಿತಿಯ ಅಧ್ಯಕ್ಷರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಸದಸ್ಯರಾದ ಭೈರತಿ ಬಸವರಾಜ, ಕೆ. ಗೋಪಾಲಯ್ಯ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment