ಯಲ್ಲಾಪುರ:
ಸಮಾಜದಲ್ಲಿ ಸೇವೆ ಸಲ್ಲಿಸುವರಲ್ಲಿ ಸಮಾಜದಲ್ಲಿ ಕರಗುವ ಗುಣವೂ ಇರಬೇಕು. ಸ್ಥಳೀಯ ಭಾಗದ ಜನರ ಆರ್ಥಿಕಮಟ್ಟ ಸುಧಾರಿಸುವಲ್ಲಿ ವಜ್ರಳ್ಳಿಯ ಕೆವಿಜಿಬಿ ಬ್ಯಾಂಕನ ಅರವಿಂದ ಪೂಜಾರರ ಶ್ರಮವಿದೆ.ಸೇವೆಯ ಹಿರಿತನ ಸಿಗುವುದು ಜನರನ್ನು ಗೆದ್ದಾಗ ಮಾತ್ರ. ಜನಸ್ನೇಹಿಯಾಗಬೇಕಾದರೆ ಸಾಮಾಜಿಕ ಆಳಕ್ಕಿಳಿಯಬೇಕು. ಸೇವೆಯಲ್ಲಿನ ಪ್ರಾಮಾಣಿಕತೆ ನಮ್ಮನ್ನು ಎತ್ತರಕ್ಕೆ ಏರಿಸಬಲ್ಲದು.ಪ್ರಾಮಾಣಿಕವಾದ ಸೇವೆಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಸಮಾಜಮುಖಿಯಾದವರಿಗೆ ಸದಾಕಾಲ ನೆಮ್ಮದಿ ಸಾಧ್ಯ. ಎಂದು ವಜ್ರಳ್ಳಿಯ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಗಜಾನನ ಭಟ್ಟ ಕಳಚೆ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತ ಸಭಾಭವನದಲ್ಲಿ ಇತ್ತೀಚೆಗೆ ಧಾರವಾಡಕ್ಕೆ ವರ್ಗಾವಣೆಗೊಂಡ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನ ಅರವಿಂದ ಪೂಜಾರವರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿತರ ಕುರಿತಾಗಿ ಅಭಿನಂದನಾ ನುಡಿಯನ್ನು ಆಡಿದರು.
ವಜ್ರಳ್ಳಿಯ ಗ್ರಾಮ ಪಂಚಾಯತದಿಂದ ನೀಡಿದ ನಾಗರಿಕ ಸನ್ಮಾನದ ಗೌರವ ಸ್ವೀಕರಿಸಿ ಮಾತನಾಡಿದ ಅರವಿಂದ ಪೂಜಾರರು ನನಗೆ ಜೀವನದಲ್ಲಿ ಅತ್ಯಂತ ತೃಪ್ತಿ ನೀಡಿದ ಸ್ಥಳ ವಜ್ರಳ್ಳಿಯ ಶಾಖೆಯಾಗಿದೆ. ಪ್ರಾಮಾಣಿಕತೆ ನನ್ನನ್ನು ಬೆಳಸಿ ಗ್ರಾಹಕರ ಪ್ರೀತಿಗಳಿಸಿದೆ. ಭಾವನಾತ್ಮಕವಾಗಿ ಬೆಸೆದುಕೊಂಡ ಸ್ನೇಹ ಶಾಶ್ವತವಾದದ್ದು. ಎಂದು
ಹೇಳಿದರು.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿದ್ದ ವಜ್ರಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ವೀಣಾ ಗಾಂವ್ಕಾರ ಮಾತನಾಡಿ ಸಾಮಾಜಿಕ ಸೇವೆ ಶ್ರೇಷ್ಠ ವಾದದ್ದು . ಸಾರ್ಥಕವಾದ ಜನ ಸೇವೆಯಲ್ಲಿ ನೆಮ್ಮದಿ ಇರಬಲ್ಲದು. ಜೀವನ ಪ್ರೀತಿ ಜನರ ಪ್ರೀತಿಯಾದಾಗ ಆತ್ಮಬಲ ಹೆಚ್ಚಬಲ್ಲದು ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರತ್ನಾ ಬಾಂದೇಕರ್, ನಿವೃತ್ತ ಶಿಕ್ಷಕ ಡಿ.ಜಿ.ಭಟ್ಟ ದುಂಢಿ, ಆದರ್ಶ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕರಾದ ಜಿ.ವಿ.ಭಟ್ಟ ಅಡ್ಕೇಮನೆ , ಮಾವಿನಮನೆ ಸೇವಾ ಸಹಕಾರಿಸಂಘದ ಅಧ್ಯಕ್ಷರಾದ ಸುಬ್ಬಣ್ಣ ಬೋಳ್ಮನೆ ,ಜಿ ಎನ್ ಕೋಮಾರ ಮಾತನಾಡಿದರು. ಗ್ರಾಮ ಪಂಚಾಯತ ಸದಸ್ಯರಾದ ತಿಮ್ಮಣ್ಣ ಗಾಂವ್ಕಾರ, ಭಗೀರಥ ನಾಯ್ಕ, ಲಲಿತಾ ಸಿದ್ಧಿ, ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ್ ಸ್ವಾಗತಿಸಿ ,ಕೊನೆಯಲ್ಲಿ ವಂದಿಸಿದರು.
ದತ್ತಾತ್ರೇಯ ಭಟ್ಟ, ಕಾರ್ಯಕ್ರಮ ನಿರೂಪಿಸಿದರು.
Leave a Comment