ಯಲ್ಲಾಪುರ: ಲಯನ್ಸ್ ಕ್ಲಬ್ನ ಪ್ರತಿಯೊಬ್ಬ ಸದಸ್ಯರು ಕ್ಲಬ್ಬಿನ ಧೈಯೋದ್ದೇಶಗಳ ಬಗ್ಗೆ ಅರಿತಿರಬೇಕು. ಸದಸ್ಯತ್ವದ ಸಂಖ್ಯೆ ಯನ್ನು ಹೆಚ್ಚಿಸಬೇಕು ಮತ್ತು ವಾರ್ಷಿಕವಾಗಿ ಐದಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಬೇಕು ಎಂದು ಲಯನ್ಸ್ ಡಿಸ್ಟಿಕ್ಸ್ ಗವರ್ನರ್ ಶ್ರೀಕಾಂತ ಮೋರೆ ಹೇಳಿದರು ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕ್ಲಬ್ಬಿನ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್ ಯ ಲ್ಲಾಪುರದಲ್ಲಿ ಹಂತಹಂತವಾಗಿ
ವಿಶೇಷ ಕಾರ್ಯಕ್ರಮಗಳ ಮೂಲಕ ಗುರುತಿಸುಕೊಳ್ಳುವಂತಗಬೇಕುಇನ್ನು ಮುಂದೆ ಸದಸ್ಯ ತ್ವ ನೋಂದಣಿ ಅದರ ಕಾರ್ಯ ಚುವಟಿಕೆಗಳ ಕುರಿತು ಮಾಹಿತಿ ಆನ್ ಲೈನ್ ನಲ್ಲಿ, ಪಡೆಬಹುದಾಗಿದೆ ಎಂದರು.ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಧರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಲ್ಲಾಪುರ ತಾಲೂಕಿನಲ್ಲಿ ಎಲ್ಲ ಸದಸ್ಯರ ಸಹಕಾರದಿಂದ ಹಲವಾರು ಉತ್ತಮವಾದಂತಹ ಕೆಲಸಗಳನ್ನು ಮಾಡುತ್ತಿದ್ದು ಹೆಚ್ಚು ಕ್ರಿಯಾಶೀಲವಾಗಿದೆ. ಲಯನ್ಸ್ ಕ್ಲಬ್ ಕೊರೋನ ಸಂದರ್ಭದಲ್ಲಿ ಸಾಮಾಜಿಕ ಸೇವೆ ಯಲ್ಲಿ ತೊಡಗಿಕೊಂಡು ಜನರಿಗೆ ನೇರವಿನ ಹಸ್ತ ವನ್ನು ನೀಡಿದೆ .
.ಡಿಸ್ಟ್ರಿಕ್ಟ್ ಗವರ್ನರ್ ಅವರ ಮಾರ್ಗದರ್ಶನದಲ್ಲಿ ಇನ್ನೂ ಮುಂದೆಯೂಕೂಡಅನೇಕಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗುವುದು ಎಂದರು
ಈ ಸಂದರ್ಭದಲ್ಲಿ ಲಯನ್, ಉಜ್ವಲ್ ಮೋರೆ ವೇದಿಕೆಯಲ್ಲಿದ್ದರು. ಯಲ್ಲಾಪುರ ಲಯನ್ ಕ್ಲಬ್ ಕಾರ್ಯದರ್ಶಿ ಅಕ್ತರ್ ಅಲಿ ಶೇಖ್, ಖಜಾಂಚಿ ಸುರೇಶ ಬೋರ್ಕರ್, ಸದಸ್ಯರಾದ ಹಿರಿಯರಾದ ಎಸ್.ಎಲ್.ಭಟ್ಟ,ನಂದನ ಬಾಳಗಿ, ಎಸ್ ಎಸ್ ಅಲ್ಲಯ್ಯನವರಮಠ, ಗೋಪಾಲ ನೇತ್ರೆಕರ್ , ಮಂಜುನಾಥ ನಾಯ್ಕ,ಮುಂತಾದವರು ಇದ್ದರು
Leave a Comment