ಗೋಕರ್ಣ : ಸಮುದ್ರದಲ್ಲಿ ಈಜುತ್ತಿರುವಾಗ ಆಕಸ್ಮಿಕವಾಗಿ ಸುಳಿಗೆ ಸಿಲುಕಿಯುವಕನೋರ್ವ ಮೃತಪಟ್ಟ ಘಟನೆ ಗೋಕರ್ಣದ ಕರಿಯಪ್ಪನಕಟ್ಟೆ ಬಳಿ ಸಮುದ್ರದಲ್ಲಿ ಸಂಭವಿಸಿದೆ.
ಛತ್ತೀಸಗಡ ಮೂಲದÀ ಆದಿತ್ಯ ಪಾಂಡೆ (23) ಮೃತ ಯುವಕ. ಈತ ಗೋಕರ್ಣಕ್ಕೆ ಪ್ರವಾಸಕ್ಕೆಂದು ಗೆಳೆಯರ ಜತೆ ಆಗಮಿಸಿ, ಕರಿಯಪ್ಪನಕಟ್ಟೆಯ ಸಮುದ್ರದಲ್ಲಿ ಈಜಾಡುತ್ತಿರುವಾಗ ಅಲೆಯ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment