ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಯಲ್ಲಾಪುರ ಶಿರಸಿ ರಾಜ್ಯ ಹೆದ್ದಾರಿ ೯೩ ಮೇಲೆ ಮಳಲಗಾಂವ್ ಶಾಲೆಯ ಸಮೀಪ ಅಪಾಯಕಾರಿ ತಿರುವಿನಲ್ಲಿ ಶುಕ್ರವಾರ ನಡೆದಿದೆ.
ಮೂರು ವರ್ಷದ ಮಗು ಸುಯೋಗ ಸಾಗರ ಹೆಗಡೆ ಸ್ಥಳದಲ್ಲೇ ಮೃತಪಟ್ಟಿದೆ.ಸಾಗರ ಮಹಾಬಲೇಶ್ವರ ಹೆಗಡೆ ಹಾಗೂ ನವ್ಯಾ ಸಾಗರ ಹೆಗಡೆ ಗಾಯಗೊಂಡಿದ್ದು,ಗಾಯಾಳುಗಳನ್ನು ಹುಬ್ಬಳ್ಳಿ ಎಸ್.ಡಿ.ಎಂ ಆಸ್ಪತ್ರೆಗೆ ಸೇರಿಸಲಾಗಿದೆ.
ಕಾರು ಯಲ್ಲಾಪುರದಿಂದ ಮಂಚಿಕೇರಿ ಕಡೆಗೆ ಮದುವೆಗೆ ಹೊರಟ್ಟಿದ್ದ ವೇಳೆ ಮಳಲಗಾಂ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು,ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment