ಯಲ್ಲಾಪುರ; ಪ್ರತಿಭಾವಂತರು ಮತ್ತು ಪ್ರಯತ್ನಶೀಲರು ಅವಕಾಶ ವಂಚಿತರಾಗಬಾರದು ಸೂಕ್ತವಾದ ಅವಕಾಶ ಕಲ್ಪಿಸಿ ಅಧ್ಯಯನಶೀಲ ಮಕ್ಕಳಿಗೆ ಸಹಕಾರ ನೀಡುವುದು ಸಮಾಜದ ಕರ್ತವ್ಯವಾಗಿದೆ.
ಈ ಕಾರ್ಯವನ್ನು ನಮ್ಮ ಸಂಸ್ಥೆ ಕೈಗೆತ್ತಿಕೊಂಡು ವಿಶ್ವದರ್ಶನ ಕರಿಯರ್ ಅಕಾಡೆಮಿ ಮತ್ತು ಪದವಿ ಪೂರ್ವ ಕಾಲೇಜುಗಳು ತರಬೇತಿಯನ್ನು ನೀಡುತ್ತಿರುವುದು ಆನಂದದ ಸಂಗತಿಯಾಗಿದೆ ಎಂದು ಕಾರ್ಯದರ್ಶಿ ನರಸಿಂಹ ಕೋಣೆಮನೆ ಹೇಳಿದರು. ಅವರು K-CET ಮತ್ತು NEET ತರಬೇತಿ ಶಿಬಿರವನ್ನು ವಿಶ್ವದರ್ಶನ ಪದವಿಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿದರು.
ವ್ಯವಸ್ಥಾಪಕಗುರುರಾಜ ಕುಂದಾಪುರ ಅವರು ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಓದುವುದಾದರೆ ನಾವು ಉತ್ತಮ ಅವಕಾಶಗಳನ್ನು ತೆರೆಯಲು ಸಿದ್ಧ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪಿ ಯು ಕಾಲೇಜಿನ ಪ್ರಾಚಾರ್ಯ ರಾದ ಡಾ. ದತ್ತಾತ್ರೇಯ ಗಾಂವ್ಕರ್ ರವರು ಓದುವುದಕ್ಕೆ ಇರುವ ದಿನಗಳನ್ನು ಸಾರ್ಥಕಪಡಿಸಿಕೊಳ್ಳಿ ಸಂಸ್ಥೆಯ ಸಂಕಲ್ಪದಂತೆ ವಿದ್ಯಾರ್ಥಿಗಳ ಮತ್ತು ಪಾಲಕರ ಕ್ಷೇಮವೇ ನಮ್ಮ ಧ್ಯೇಯ ಎಂದರು . ಸಚಿನ್ ಭಟ್ ನಿರ್ವಹಿಸಿದರು. ವಿನಾಯಕ ಭಟ್ಟ ಹಾಗೂ ಪ್ರಸನ್ನ ಭಟ್ಟ ಸಂಯೋಜಿಸಿದರು.
ವಿಜಯಶ್ರೀ ಗಾವ್ಕರ್ ವಂದಿಸಿದರು.ವಿಶ್ವದರ್ಶನ ಅಂಗಸಂಸ್ಥೆಗಳ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಳ್ಳತನ ಕ್ಕೆ ಯತ್ನಿಸಿದ್ದ ವ್ಯಕ್ತಿಯ ಬಂಧನ
Leave a Comment