
ಯಲ್ಲಾಪುರ: ಪಟ್ಟಣ ಪಂಚಾಯತ ವತಿಯಿಂದ ವಾರ್ಡಗಳ ಚರಂಡಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ಮಳೆಗಾಲದ ಪೂರ್ವ ಸಿದ್ಧತೆ ಯಾಗಿ ಕಳೆದ ಮರ‍್ನಾಲ್ಕುದಿನಗಳಿಂದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು ಈಗಾಗಲೇ ೫ ವಾರ್ಡಗಳಲ್ಲಿ ಪೂರ್ಣಗೊಂಡಿದ್ದು , ೧೯ ವಾರ್ಡಗಳಲ್ಲಿ ಎರಡು ಹಂತಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು ಇದಕ್ಕಾಗಿಯೇ ಪಪಂ ನಿಂದ ೭ಲಕ್ಷ ರೂ ವಿನಿಯೋಗಿಸಲಾಗುತ್ತಿದ್ದು , ಮಳೆಗಾಲದೊಳಗೆ ಎಲ್ಲ ವಾರ್ಡಗಳಲ್ಲಿ ಪೂರ್ಣಗೊಳಿಸಲಾಗುವದು.

ಚರಂಡಿಯಲ್ಲಿ ಕಸಕಡ್ಡಿ ಹೂಳು ತುಂಬಿಕೊAಡು ಮಳೆ ನೀರು ರಸ್ತೆ ಮೇಲೆ ಹರಿಯುತ್ತದೆಯಲ್ಲದೇ ಮನೆಗಳಿಗೂ ನುಗ್ಗಿ ಆವಾಂತರ ಸೃಷ್ಟಿಸುತ್ತದೆ. ಆದ್ದರಿಂದ ಚರಂಡಿ ನೀರು ಸಾರಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಲಾಗುತ್ತಿದೆ. .ಎಂದು ಸ್ಥಳ ದಲ್ಲಿಯೇ ಇದ್ದ ಪಪಂಮುಖ್ಯಾಧಿಕಾರಿ ಸಂಗನಬಸಯ್ಯಾ ಹೇಳಿದರಲ್ಲದೇ ಪಪಂನಿAದ ಮನೆ ಮನೆಗೆ ಕಸ ಸಂಗ್ರಹ ಗಾಡಿ ,ಅಲ್ಲಲ್ಲಿ ಕಸದ ತೊಟ್ಟಿಯ ವ್ಯವಸ್ಥೆ ಇದ್ದರೂ ಕೂಡ ಚರಂಡಿಯಲ್ಲಿ ಇಷ್ಟೋಂದು ಪ್ರಮಾಣದಲ್ಲಿ ಕಸ ತುಂಬಿಕೊAಡಿರುವದು ಬೇಸರದ ಸಂಗತಿ .ಎಂದರು ಆರೋಗ್ಯಾಧಿಕಾರಿ ಗುರು ಗಡಗಿ ಇದ್ದರು
ಗೋಪಾಲ ಕೃಷ್ಣಗಲ್ಲಿಗೆ ಪಪಂ ,ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ, ಸ್ಥಾಯಿಸಮಿತಿ ಅಧ್ಯಕ್ಷ ಆದಿತ್ಯ ಗುಡಿಗಾರ, ಭೇಟಿ ನೀಡಿದ ಅವರು ಕಸವನ್ನು ಚರಂಡಿಗೆ ಎಸೆಯದೇ ಕಸದ ತೊಟ್ಟಿಗೆ ಹಾಕಬೇಕು ಜವಾಬ್ದಾರಿಯಿಂದ ವರ್ತಿಸಬೇಕು.ರೋಗ ರುಜಿನ ಹರಡದಂತೆ ಎಚ್ಚರಿಕೆ ವಹಿಸುವಲ್ಲಿ ಸಾÀರ್ವಜನಿಕರ ಪಾತ್ರ ಪ್ರಮುಖವಾಗಿದೆ. ಎಂದರು.
Leave a Comment