ಯಲ್ಲಾಪುರ: ತಾಲೂಕಿನಲ್ಲಿ ಬಿತ್ತನೆಗೂ ಮುನ್ನವೇ ಉತ್ತಮ ಮಳೆಯಾಗಿದೆ.ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ,ರಸಗೊಬ್ಬg ದಾಸ್ತಾನು ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಹೇಳಿದರು.
ಅವರು ಮುಂಗಾರು ಕೃಷಿಗೆ ಸಿದ್ಧತೆ ಕುರಿತು ಮಾಹಿತಿ ನೀಡಿ ತಾಲೂಕಿನಲ್ಲಿ ೩೧೯೨ ಹೇಕ್ಟೇರ ಕೃಷಿ ಕ್ಷೇತ್ರವಿದೆ. ಅದರಲ್ಲಿ ೨,೭೫೫ ಹೇಕ್ಟೇರ್ ಭತ್ತ ,೪೨ ಹೇ ಹತ್ತಿ, ೧೫೦ ಹೇ ಕಬ್ಬು , ೧೪೫ ಹೇ ಮೆಕ್ಕೆಜೋಳ ಬೆಳೆಯುವ ಪ್ರದೇಶವಿದೆ. ೨೦೫ ಟನ್ ರಸಗೊಬ್ಬರ, ೨೩೬ ಕ್ವಿಂಟಲ್ ಬಿತ್ತನೆ ಬೀಜ ರೈತಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಇದೆ.ಕೃಷಿಕರು ಬೀಜೋಪಚಾರ ಮಾಡಿಯೆ ಬಿತ್ತನೆ ಮಾಡಬೇಕು. ರೈತ ಸಂಜೀವಿನಿ ಮೋಬೈಲ ವಾಹನ ತಾಲೂಕಿಗೆ ಬಂದಿದ್ದು . ಇದರಿಂದ ರೈತರಿಗೆ ಸ್ಥಳದಲ್ಲಿಯೇ ಮಣ್ಣು ಪರೀಕ್ಷೆ ,ಬೆಳೆಗಳಿಗೆ ಪೌಷ್ಠಿಕಾಂಶ ನೀಡುವ ಕುರಿತು ಮಾಹಿತಿ ಲಭ್ಯವಾಗುತ್ತದೆ. ರೈತಶಕ್ತಿಯೋಜನೆಯಡಿ ಎಕರೆಗೆ ೨೫೦ರೂ(೫ಎಕರೆಗಳವರೆಗೆ) ಸಹಾಯಧನ ನೀಡಲಾಗುತ್ತದೆ. ರೈತರು ಸರ್ವೇ ನಂ ನ್ನು ರೈತಸಂಪರ್ಕಕೇAದ್ರಗಳಲ್ಲಿ ನೊಂದಣೀ ಮಾಡಿರಬೇಕು. .ಕಚೇರಿಯಲ್ಲಿ ತಾಂತ್ರಿಕ ವಿಭಾಗದಲ್ಲಿ ೨ ,೩ ಅಧಿಕಾರಿ ಹುದ್ದೆUಳು ಸೇರಿ ಒಟ್ಟು ೧೭ ಹುದ್ದೆಗಳು ಖಾಲಿ ಇವೆÀ .ಸಿಬ್ಬಂದಿಗಳ ಕೊರತೆಯಿದ್ದರೂ ಸಕಾಲದಲ್ಲಿ ರೈತರಿಗೆ ಸೇವೆ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ತಾಲೂಕಿನಲ್ಲಿ ೨೫೦ ಹೇಕ್ಟೇರ್ ಭತ್ತ ಬಿತ್ತನೆಗೆ ಯೋಗ್ಯ ಭೂಮಿ ಬೀಳುಬಿದ್ದಿದೆ.ರೈತರ ಮನವೂಲಿಸಿ ಕೃಷಿಯಲ್ಲಿ ಆಸಕ್ತಿ ಹೊಂದಿದವರಿಗೆ ಭೂಮಿ ನೀಡಿ ಆಹಾರ ಬೆಳೆ ಬೆಳೆಯಲು ಉತ್ತೇಜನ ನೀಡುವ ಮಹತ್ವಾಕಾಂಕ್ಷೆ ಯೋಜನೆ ಇದೆ ಎಂದರು. ಆತ್ಮಾ ಯೋಜನಾಧಿಕಾರಿ ಎಂ.ಜಿ ಭಟ್ಟ ಮಾತನಾಡಿ ಉಮ್ಮಚಗಿ ಹಾಸಣಗಿ ಸಂಘಗಳಿಗೆ ಅಡಿಕೆ ಧೋಟಿ ನೀಡಲಾಗಿದ್ದು ಜೂನನಲ್ಲಿ ದೋಟಿ ಬಳಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಾಸಣಗಿ ರೈತರ ತೋಟದಲ್ಲಿ ಅಯೋಜಿಸಲಾಗಿದೆ ಎಂದರು.
Leave a Comment