ಶಿರಸಿ: ಅಪಘಾತ ಪ್ರಕರಣಕ್ಕೆ ಸಂಬAಧಿಸಿ, ನ್ಯಾಯಾಲಯದ ಆದೇಶವಿದ್ದರೂ ಪರಿಹಾರ ನೀಡದ ಸಾರಿಗೆ ಸಂಸ್ಥೆ ಮೇಲೆ ಕ್ರಮ ಜರುಗಿಸಿದ ಇಲ್ಲಿನ ನ್ಯಾಯಾಲಯ ಬಸ್ಸನ್ನು ಜಪ್ಪು ಮಾಡಿಸಿ ತನ್ನ ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ. ಶಿರಸಿ ಡಿಪೋದ ಸಾರಿಗೆ ಸಂಸ್ಥೆ ಬಸ್ 2018ರಲ್ಲಿ ಮುಂಡಗೋಡ ತಾಲೂಕಿನ ಕಲ್ಲುಕೊಪ್ಪ ಬಳಿ ಬಸ್ ಹಾಗೂ ಬೈಕ್ ಅಪಘಾತ ಸಂಭವಿಸಿತ್ತು .ಈ ಸಂಬAಧ ವಿಚಾರಣೆ ನಡೆಸಿದ ನ್ಯಾಯಾಲಯ ಸಾರಿಗೆ ಇಲಾಖೆಗೆ 14.6ಲಕ್ಷ ರೂ.ಪರಿಹಾರ ನೀಡುವಂತೆ ಆದೇಶ ನೀಡಿತ್ತು.
ಹೆಚ್ಚುವರಿ ಪರಿಹಾರ ಕೋರಿ ಹೈಕೋರ್ಟ್ ಗೆ ಕಕ್ಷಿದಾರರು ಮೇಲ್ಮನವಿ ಸಲ್ಲಿಸಿದ್ದರು.ಪ್ರಕರಣವನ್ನು ಆಲಿಸಿದ ಹೈಕೋರ್ಟ್ ಹೆಚ್ಚುವರಿ ಹಣವನ್ನು ನೀಡುವಂತೆ ತೀರ್ಪು ನೀಡಿ ಆದೇಶಿಸಿತ್ತು. ಆದರೆ ಸಾರಿಗೆ ಇಲಾಖೆ ಹೆಚ್ಚುವರಿ ಹಣವನ್ನು ನೀಡದೆ ಸತಾಯಿಸುತ್ತಿರುವ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಧೀಶರಾದ ಕಮಲಾಕ್ಷಿ ಡಿ., ವಾಹನವನ್ನು ಜಪ್ತಿ ಪಡಿಸುವಂತೆ ಆದೇಶ ನೀಡಿದ್ದರು.ಅದರಂತೆ ವಾಹನ ವನ್ನು ಜಪ್ತಿ ಪಡಿಸಲಾಗಿದೆ. ಪರಿಹಾರದ ಹಣ ನೀಡುವವರೆಗೂ ಬಸ್ ನ್ಯಾಯಾಲಯದ ವಶದಲ್ಲೇ ಇರಲಿದೆ ಎಂದು ತಿಳಿದು ಬಂದಿದೆ.ನೊAದವರ ಪರವಾಗಿ ಟಿ ಬಿ ಸವಣೂರು ಹಾನಗಲ್ ವಾದ ಮಂಡಿಸಿದ್ದರು
Leave a Comment