ಕಾರವಾರ: ಜಿಲ್ಲೆಯ ಪಡಿತರ ಚೀಟಿದಾರರು ಸಮೀಪದ ನ್ಯಾಯಬೆಲೆ ಅಂಗಡಿಗೆ ಹೋಗಿ ಇಲಾಖೆಯ ತಂತ್ರಾಂಶದಲ್ಲಿ ಇ ಕೆವೈಸಿ ಮಾಡಿಸಿಕೊಳ್ಳಲು ಜೂ.30 ಕೊನೆಯ ದಿನವಾಗಿದೆ.
ಜಿಲ್ಲೆಯಲ್ಲಿ 16313 ಅಂತ್ಯೋದಯ ಚೀಟಿಗಳ ಪೈಕಿ 12319 ಪಡಿತರದಾರರು ಇ-ಕೆವೈಸಿ ಮಾಡಿಸಿಕೊಂಡಿದ್ದು, 3994 ಪಡಿತರದಾರರು ಬಾಕಿ ಉಳಿದುಕೊಂಡಿದ್ದಾರೆ. 293232 ಬಿಪಿಎಲ್ ಪಡಿತರ ಚೀಟಿಗಳ ಪೈಕಿ 236876 ಪಡಿತರದಾರರು ಇ- ಕೆವೈಸಿ ಮಾಡಿಕೊಂಡಿದ್ದು, 56356 ಪಡಿತರದಾರರು ಬಾಕಿ ಉಳಿದುಕೊಂಡಿದ್ದಾರೆ.
ಜೂನ್ ಅಂತ್ಯದೊಳಗಾಗಿ ಬಾಕಿ ಉಳಿದ ಪಡಿತರದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಲೇಬೇಕು. ನಂತರದ ದಿನಗಳಲ್ಲಿ ಇ-ಕೆವೈಸಿ ಮಾಡಿಸದ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಮಂಜುನಾಥ ಡಿ.ರೇವಣಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment