
ಯಲ್ಲಾಪುರ: ವಿದ್ಯಾರ್ಥಿಗಳು ಇಚ್ಚಾ ಶಕ್ತಿಯೊಂದಿಗೆ ಕ್ರಿಯಾ ಶಕ್ತಿಯನ್ನು ಅಳವಡಿಸಿಕೊಂಡು ಯೋಜನೆ ರೂಪಿಸಬೇಕು. ಪಾಲಕರೂ ಕೂಡ ತಮ್ಮ ಮಕ್ಕಳ ಬಗೆಗೆ ಬಹು ನಿರೀಕ್ಷೆ ಹೊಂದಿರುತ್ತಾರೆ.
ಎಂದು ಬೆಂಗಳೂರು ಬೇಸ್ ಅಕಾಡೆಮಿಯ ಸಂಸ್ಥಾಪಕ ಡಾ.ಎಚ್.ಎಸ್. ನಾಗರಾಜ ಹೇಳಿದರು.ಅವರು ಪಟ್ಟಣದ ವಿಶ್ವದರ್ಶನ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆ ಪ್ರಾರಂಭೋತ್ಸವ ಹಾಗೂ ಶಿಕ್ಷಕರೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಉದ್ಗಾಟಿಸಿ ಪಿ.ಯು. ತರಗತಿಗೆ ಚಾಲನೆ ನೀಡಿ ಮಾತನಾಡಿಆ ಗುರಿ ತಲುಪಲು ಧೈರ್ಯದೊಂದಿಗೆ , ಮಾನಸಿಕ ದೃಢತೆ ಯೊಂದಿಗೆ ಸಿಗುವ ಅವಕಾಶ ಮತ್ತು ಆಹ್ವಾನಗಳನ್ನು ಸವಾಲಾಗಿ ಸ್ವೀಕರಿಸಬೇಕು. ಒಂದೊಂದೇ ಮೆಟ್ಟಿಲೇರುತ್ತಾ ಸಾಗಿದರೆ ನಮ್ಮ ಉದ್ದೇಶಿತ ಗುರಿ ತಲುಪಲು ಸಾಧ್ಯ. ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ
ಹರಿಪ್ರಕಾಶ ಕೋಣೇಮನೆ ಮಾತನಾಡಿ ನಮ್ಮ ಸಂಸ್ಥೆ ಹೊಸ ಅಧ್ಯಾಯ ಬರೆಯುತ್ತಿದೆ. ಶೈಕ್ಷಣಿಕ ಕ್ಷೆತ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದೆ ಅದಕ್ಕೆ ಪೂರಕವಾಗಿಯೆ ಪಿ.ಯು. ತರಗತಿಯನ್ನು ಪ್ರಾರಂಭಿಸಿದ್ದೇವೆ, ಯಲ್ಲಾಪುರದಲ್ಲಿ ಅನೇಕ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಆದರೆ ಯಾವುದೇ ಸಂಸ್ಥೆಗೆ ಸ್ಪರ್ಧೆ ಒಡ್ಡುವ ಉದ್ದೇಶ ನಮ್ಮದಲ್ಲ. ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆ ನಮ್ಮದು, ನಮ್ಮ ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯುವುದೊಂದೇ ಪ್ರಮುಖವಾಗಿರದೇ, ಉತ್ತಮ ನಾಗರಿಕರನ್ನಾಗಿಸುವ ಮಹತ್ವದ ಉದ್ದೇಶ ಹೊಂದಿದ್ದೆವೆ. ಎಂದರು
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಹಾಗೂ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ಅಪೂರ್ವಾ ಕೆರೆತೋಟ ಪ್ರಾರ್ಥಿಸಿದಳು. ಪ್ರಾಚಾರ್ಯ ಡಾ.ಡಿ.ಕೆ.ಗಾಂವಕರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಮೇಶ ನಾಯ್ಕ ನಿರ್ವಹಿಸಿದರು.ಶಿಕ್ಷಕಿ ಕವಿತಾ ಹೆಬ್ಬಾರ ವಂದಿಸಿದರು.
ಎಲ್ಲ ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು .
Leave a Comment