ಯಲ್ಲಾಪುರ: ಜಿಲ್ಲೆಯಲ್ಲಿ ಯಲ್ಲಾಪುರದ ಪತ್ರಕರ್ತರು ವಿಶೇಷ ಮಾನ್ಯತೆ, ಗೌರವ ಹೊಂದಿದ್ದಾರೆ. ಸಂಘಟನೆ ಆ ಗೌರವ ಕಾಯ್ದುಕೊಂಡು ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಹೇಳಿದರು.ಅವರು ಪಟ್ಟಣದ ನೌಕರರ ಭವನದಲ್ಲಿ . ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಪಾಲ್ಗೊಂಡು, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿಮಾತನಾಡಿದರು.
ಪದಾಧಿಕಾರಿಗಳಾಗಿ ಕೆ.ಎಸ್.ಭಟ್ಟ ಆನಗೋಡ ಜಿ.ಎನ್.ಭಟ್ಟ ತಟ್ಟಿಗದ್ದೆ, ಶ್ರೀಧರ ಅಣಲಗಾರ ದತ್ತಾತ್ರೇಯ ಭಟ್ಟ ಕಣ್ಣಿಪಾಲ ಆಯ್ಕೆಯಾದರು
ಜಿಲ್ಲಾ ಸಂಘದ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರಭಾವತಿ ಗೋವಿ, ತಾಲೂಕು ಸಂಘದ ಸದಸ್ಯರಾದ ಸುಬ್ರಾಯ ಬಿದ್ರೆಮನೆ, ಜಯರಾಜ ಗೋವಿ ಇದ್ದರು .
Leave a Comment