ಹೊನ್ನಾವರ: ತಾಲೂಕಿನ ಗೇರುಸೊಪ್ಪಾದ ರಾಷ್ಟ್ರೀಯ ಹೆದ್ದಾರಿ 69ರ ಬಾವೂರ ಕ್ರಾಸ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಸ್ ಚಲಾಯಿಸಿ ಸ್ಕೂಟರ್ ಸವಾರನಿಗೆ ಡಿಕ್ಕಿ ಪಡಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮೃತಪಟ್ಟ ದುರ್ದೈವಿ ಬಾವೂರ ಸರಳಗಿಯ ನಿವಾಸಿ ಮೈದಿನ್ ಸುಲೆವಾನ್ ಖಾನ್ (60) ಎಂದು ಗುರುತಿಸಲಾಗಿದೆ.
ಬಾವೂರ ಕ್ರಾಸ್ ಹತ್ತಿರ ಹೊನ್ನಾವರ ಕಡೆಯಿಂದ ಗೇರಸೊಪ್ಪ ಕಡೆಗೆ ಕೆ.ಎಸ್. ಆರ್.ಟಿ.ಸಿ ಬಸ್ ಅತಿವೇಗವಾಗಿ ಬಂದಿದ್ದು ಈ ವೇಳೆ ಹೊನ್ನಾವರ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಮೈದಿನ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಅಪಘಾತ ಪಡಿಸಿದ ಕುಮಟಾ ಡಿಪ್ಪೋ ಬಸ್ ಚಾಲಕ ಶ್ರೀಕಾಂತ ನಾಯ್ಕ ದೇವರಗದ್ದೆ ಎನ್ನುವವನನ್ನ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
Leave a Comment