ಯಲ್ಲಾಪುರ :
ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ದೀರ್ಘಕಾಲದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ ಎಂದು ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿ ಹೇಳಿದರು.ಅವರು ಅರಬೈಲ್ ಸ.ಹಿ.ಪ್ರಾ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡಿ
ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು, ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ.ಯೋಗ ಮಾಡುವುದರಿಂದ ಮನಸ್ಸು ಏಕಾಗ್ರತೆಯನ್ನು ಸಾಧಿಸಲು ಹಾಗೂ ಆರೋಗ್ಯ ವೃದ್ಧಿಗೆ ಸಹಕಾರಿ.ಆರೋಗ್ಯವೇ ಭಾಗ್ಯ ಎಂದು ಯೋಗದ ಮಹತ್ವ ಹಾಗೂ ಯೋಗದ ವಿವಿಧ ಆಸನಗಳ ಕುರಿತು ತಿಳಿಸಿದರು.ಶಿಕ್ಷಕರಾದ ನಾಗರಾಜ ಆಚಾರಿ,ರಾಮ ಟಿ ಗೌಡ .ಗ್ರಾಮ ಪಂಚಾಯತ ಸದಸ್ಯೆ ಆಶಾ ನಾಯರ್ ಉಪಸ್ಥಿತಿತರಿದ್ದರು.ವಿದ್ಯಾರ್ಥಿಗಳು
ಯೋಗ ಪ್ರಾತ್ಯ ಕ್ಷಿಕೆ ಯಲ್ಲಿ ಉತ್ಸುಕತೆಯಿಂದ ಭಾಗವಹಿಸಿದ್ದರು.
Leave a Comment