ಯಲ್ಲಾಪುರ : ಹೆಣ್ಣುಮಕ್ಕಳ ಜೀವನಕ್ಕೆ ಸಹಕಾರಿಯಾಗಲೆಂದು ಸುಕನ್ಯಾ ಸಮೃದ್ಧಿ ಯೋಜನೆ, ಭಾಗ್ಯಲಕ್ಷಿ ಬಾಂಡ್ ನೀಡಲಾಗುತ್ತಿದೆ. ಅರ್ಹರಿಗೆ ಸರ್ಕಾರದ ವತಿಯಿಂದ ಸೂರು ಕಟ್ಟಿಕೊಳ್ಳಲು ಸಹಾಯ ಮಾಡಲಾಗುತ್ತಿದೆ. ಈ ಮೂಲಕ ಬಡ ಜನರ ಅಗತ್ಯತೆ ಪೂರೈಸುವದರಲ್ಲಿ ನಮ್ಮ ಸರ್ಕಾರ ಸದಾ ಅವರ ಜೊತೆಗಿದೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದ ಗಾಂಧಿ ಕುಟೀರದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಹಾಗೂ ಸಾಧನಗಳನ್ನು ವಿತರಿಸಿ ಮಾತನಾಡಿದ ಅವರು, ಕಳೆದೆರಡು ವರ್ಷ ಕೊರೋನಾ ಕಾರಣದಿಂದಾಗಿ ಜನರ ಜೀವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯಕ್ಕೆ ಸಂಬAಧಿಸಿದ ಮೂಲಭೂತ ಸೌಕರ್ಯಗಳನ್ನಷ್ಟೇ ಅಭಿವೃದ್ಧಿ ಪಡಿಸಲಾಯಿತೇ ಹೊರತು, ಬೇರೇನೂ ಸಾಧ್ಯವಾಗಲಿಲ್ಲ. ಈಗ ಉಳಿದ ಕ್ಷೇತ್ರಗಳ ಅಭಿವೃದ್ದಧಿಗೆ ಸನ್ನದ್ಧರಾಗಿದ್ದೇವೆ .
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ೩೪ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ, ಅಗತ್ಯವುಳ್ಳವರಿಗೆ ಶ್ರವಣ ಸಾಧನ, ಹೊಲಿಗೆ ಯಂತ್ರ, ವೀಲ್‌ಚೇರ್ ಅನ್ನು ವಿತರಿಸಿದರು. ತಾಲೂಕಿನ ೧೫ ಗ್ರಾಮ ಪಂಚಾಯತಿಗಳ ೪೬೦ ಹಾಗೂ ಪ.ಪಂ ವ್ಯಾಪ್ತಿಯ ೩೮ ಜನರಿಗೆ ಮನೆ ಹಕ್ಕುಪತ್ರವನ್ನು ನೀಡಲಾಯಿತು.
ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ,
ತಹಶಿಲ್ದಾರ್ ಶ್ರೀಕೃಷ್ಣ ಕಾಮಕರ್, ತಾ.ಪಂ. ಆಡಳಿತ ಅಧಿಕಾರಿ ನಟರಾಜ್, ಪ.ಪಂ. ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಎಲ್ಲ ಗ್ರಾ.ಪಂ. ಅಧ್ಯಕ್ಷರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್ ಸ್ವಾಗತಿಸಿದರು. ಶಿಕ್ಷಕ ಸುಧಾಕರ ನಾಯಕ ನಿರೂಪಿಸಿದರು.
ಮಹಿಳೆಯರ ಒಳ ಉಡುಪಿನಲ್ಲಿ ಚಿನ್ನ ಸಾಗಾಟಕ್ಕೆ ಯತ್ನ ; ಕಸ್ಟಮ್ಸ್ ತಂಡದಿಂದ ಭಟ್ಕಳ ಮೂಲದ ವ್ಯಕ್ತಿ ಬಂಧನ
Leave a Comment