ಆಸ್ಪತ್ರೆ ಬಳಿ ಮುಗಿಲು ಮುಚ್ಚಿದ ಸಂಬAಧಿಕರ ಆಕ್ರಂದನ
ಕುಮಟಾ : ಹೆರಿಗೆಗೆ ಹೋದ ಗರ್ಭೀಣಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದು, ಹಸುಗೂಸು ಅನಾಥವಾಗಿದೆ. ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಅಕೋಶ ವ್ಯಕ್ರಪಡಿಸಿದ್ದಾರೆ.
ಜಯಮಾಲ ಮಿರ್ಜಾನಕರ ಎನ್ನುವವರ ಹೆರಿಗೆಗೆ ಪಟ್ಟಣದ ಜಾನು ಮಣಿಕರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನವೇ ಗಂಡು ಮಗುವಿಗೆ ಜನ್ಮ ಗರ್ಭಿಣಿಗೆ ಕಳೆದ 2-3 ದಿನಗಳಿಂದ ಎದೆ ನೋವು ಕಾಣಿಸಿಕೊಂಡಿತ್ತು. ಈ ಬಗ್ಗೆ ವೈದ್ಯರಿಗೆ ತಿಳಿಸಿದಾಗ ವೈದ್ಯರು ಗ್ಯಾಸ್ಟಿçಕ್ ಎಂದು ಹೇಳಿ ಚಿಕಿತ್ಸೆ ನೀಡುತ್ತಾಬಂದಿದ್ದು ಮಂಗಳವಾರ ಬೆಳಿಗ್ಗೆ ಅಸುನೀಗಿದ್ದಾಳೆ.
ಜಯಮಾಲ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆಸ್ಪತ್ರೆಯ ಎದುರು ಕುಟುಂಬಸ್ಥರು ಅಕ್ರೋಶ ವ್ಯಕ್ತಪಡಿಸಿದ್ದು, ವೈದ್ಯರೊಂದಿಗೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಪಿಎಸ್ಐ ನವೀನ ನಾಯ್ಕ, ಕುಟುಂಬಸ್ಥರನ್ನು ಸಮಾಧಾನಪಡಿಸುವ ಕಾರ್ಯ ಮಾಡಿದರು. ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮೃತ ಗರ್ಭೀಣಿಯ ಪತಿ ಪೊಲೀಸ್ ದೂರು ನೀಡಿದ್ದಾರೆ.
Leave a Comment