
ಯಲ್ಲಾಪುರ: : ತಾಲೂಕಿನ ರಾ.ಹೆ.63ರ ಇಡಗುಂದಿ ಗ್ರಾಪಂ ವ್ಯಾಪ್ತಿಯ ಆರ್ತಿಬೈಲ್ ಬಳಿ ರಸ್ತೆ ಬದಿ ರಾಸಾಯನಿಕ ತುಂಬಿದ್ದ ಟ್ಯಾಂಕರವೊಂದು ಪಲ್ಟಿಯಾಗಿತ್ತು . ಸ್ಥಳಕ್ಕೆ ತೆರಳಿದ ಪಿ.ಐ. ಸುರೇಶ ಯಳ್ಳುರು, ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು 3-4 ಬೃಹತ್ ಕ್ರೇನ್ಗಳನ್ನು ತರಿಸಿ ಟ್ಯಾಂಕರ್ನ್ನು ಮೇಲಕ್ಕೆತ್ತಲು ಹರಸಾಹಸಪಟ್ಟರು ಟ್ಯಾಂಕ ಎತ್ತುವ ಪ್ರಕ್ರಿಯೆ ರಾತ್ರಿವರೆಗೂ ಮುಂದುವರಿದಿತ್ತು ನಂತರ ಮೇಲಕ್ಕೆತ್ತಲಾಯಿತು.
ಆರು ತಾಸುಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.
. ಹೊರ ಜಿಲ್ಲೆಗಳಿಂದ ಒಟ್ಟು ಆರು ಕ್ರೇನ್ಗಳನ್ನು ತರಿಸಿ ಕಾರ್ಯಾಚರಣೆ ಮಾಡಲಾಯಿತು.ಈ ವೇಳೆ
ಎರಡು ಕ್ರೇನ್ಗಳ ರೋಪ್ ತುಂಡಾಗಿ ದ್ದರಿಂದ ವಿಳಂಬವಾಯಿತು.
ಹೊಸ ರೋಪ್ ತಂದು ಅಳವಡಿಸಿದ ನಂತರ – ಕಾರ್ಯಾಚರಣೆಯನ್ನು ಮುಂದುವರಿ ಸಲಾಯಿತು. ಇದರಿಂದ ವಾಹನ ಸಂಚಾರಕ್ಕೆ ಆಡತಡೆಯಾಯಿತು. ಹೆದ್ದಾರಿಯ ಇಕ್ಕೆಲಗಳಲ್ಲಿ ವಾಹನಗಳು 2 ಕಿ.ಮೀ. ದೂರದವರೆಗೂ ನಿಂತಿದ್ದವು. ಇಡಗುಂದಿ ಸ್ನೇಹಸಾಗರ ಬಳಗಾರ ರಸ್ತೆ ಮೂಲಕ ಸಣ್ಣ ಪುಟ್ಟ ವಾಹನ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.
ಹೆದ್ದಾರಿಯ ಎರಡೂ ಬದಿಗಳಲ್ಲಿ ದೊಡ್ಡ ವಾಹನಗಳು, ಬಸ್ಗಳು ಹೆದ್ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದವು.ಇದೀಗ ತೆರವು ಗೊಳಿಸಲಾಗಿದ್ದು ಸಂಚಾರ ಸುಗಮ ವಾಗಿದೆ
Leave a Comment