ಯಲ್ಲಾಪುರ :ತಾಲೂಕಿನ ಸ್ನೇಹ ಸಾಗರ ವಸತಿ ಶಾಲೆಯಲ್ಲಿ ೭೫ ರ ಸ್ವಾತಂತ್ರö್ಯ ಅಮೃತ ಮಹೊತ್ಸವದ ಸವಿನೆನಪಿಗಾಗಿ ಅಂಗವಾಗಿ ಶಾಲೆಯ ಸುತ್ತ-ಮುತ್ತ ೭೫ ಗಿಡಗಳನ್ನು ನೆಡುವುದರ ಮೂಲಕವಾಗಿ ವನಮಹೋತ್ಸವಕ್ಕೆ ಚಾಲನೆ ನೀಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ ಮಾತನಾಡಿ ಸೃಷ್ಟಿಯಲ್ಲಿ ಪರಿಸರವು ವಿಶಿಷ್ಟ ಅದ್ಭುತವಾದ ಚೈತನ್ಯವನ್ನು ಹೊಂದಿದೆ ಹಾಗಾಗಿ ಜೀವಿಗಳು ಭೂಮಿಯಲ್ಲಿ ಪರಿಸರವನ್ನೆ ಅವಲಂಬಿಸಿದೆ.
ಅಭಿವೃದ್ಧಿಯ ಜೊತೆಗೆ ಪರಿಸರಕ್ಕೆ ಹಾನಿ ಮಾಡದೆ ಮುಂದಿನ ತಲೆಮಾರಿಗೂ ಪರಿಸರವನ್ನು ಕಾಪಿಡಬೇಕು.ಪಶ್ಚಿಮ ಘಟ್ಟವು ಔಷದಿಸಸ್ಯಗಳನ್ನು ವಿಶೇಷಪ್ರಬೇಧವನ್ನು ಒಳಗೊಂಡಿರುವದರಿAದ ಕಾಡನ್ನು ಉಳಿಸಿ ಬೆಳೆಸಿ ಸಂರಕ್ಷಿಸಬೇಕು ಎಂದರು.
ಪರಿಸರ ತಜ್ಞ ಶಿವಾನಂದ ಕಳವೆ ಮಾತನಾಡಿ ಹನಿ ನೀರಿಗೂ ಸಸ್ಯಸಂಕುಲವೇ ಆಧಾರವಾಗಿದೆ.
ಪರಿಸರದಲ್ಲಿ ವೈವಿದ್ಯಮಯ ಶಿಕ್ಷಣ ಸಿಗುತ್ತದೆ. ಮಳೆಯ ಅಭಾವ, ವನ್ಯಜೀವಿಗಳ ರಕ್ಷಣೆಗಾಗಿ ಹಸಿರಿನ ಉಳಿವು ಅತ್ಯಗತ್ಯವಿದೆ. . ಜೊತೆಗೆ ಇಂಗುಗುAಡಿಗಳನ್ನು ನಿರ್ಮಿಸಿ, ಅಂತರ್ಜಲವನ್ನು ಹೆಚ್ಚಿಸಿ ನೀರಿನ ಅಭಾವವನ್ನು ಕಡಿಮೆ ಮಾಡಬೇಕೆಂದು ಸಲಹೆ ಹೇಳಿದರು.
ಆರಎಫಓ ಹಿಮವತಿ ಭಟ್ ಮಾತನಾಡಿ ಕಾಡನ್ನು, ಪರಿಸರವನ್ನು, ಪುಸ್ತಕದಲ್ಲಿ ಮಾತ್ರ ಓದದೇ ಕಾಡಿನ ಮಧ್ಯೆಯೇ ಅರ್ಥ ಮಾಡಿಕೊಳ್ಳಬೇಕು. ಗಿಡಮರಗಳ ಒಡನಾಟದಿಂದ ಅದೇ ನಮಗೆ ಜ್ಞಾನವನ್ನು ನೀಡುತ್ತೆ. ಅರಣ್ಯ ಸಂಪನ್ಮೂಲಗಳು ಸ್ವಾಭಾವಿಕವಾಗಿ ಒದಗಬೇಕು ಹೊರತು ಆಕ್ರಮಿಸಿ ಪಡೆಯಬಾರದು ಎಂದರು.
ಸಂಸ್ಥೆಯ ಅಧ್ಯಕ್ಷ ಎಸ್. ಎಲ್ ಭಟ್,ಶಾಲೆಯಲ್ಲಿ ಪ್ರತಿವರ್ಷ ಹೊಸ ಹೊಸ ತಳಿಗಳನ್ನು ನೆಟ್ಟು ಕಾಳಜಿಯಿಂದ ಬೆಳೆಸುತ್ತಾ ಬಂದಿದ್ದು, ಮಕ್ಕಳಿಗೆ ಪರಿಸರದ ಮಹತ್ವ ತಿಳಿಸಿ ಪ್ರಕೃತಿಯಲ್ಲಿ ಬೆರೆಯುವ ಗುಣ ಮಕ್ಕಳಲ್ಲಿ ಬರಲಿ, ನಮ್ಮ ಜವಾಬ್ಧಾರಿ ಪರಿಸರದ ಜೊತೆಗೆ ಸಾಗಬೇಕು ಎಂದರು. ವಲಯ ಅರಣ್ಯರಕ್ಷಣಾಧಿಕಾರಿ ಪ್ರಸಾದ್ ಪಡ್ನೇಕರ್ ಹಾಗೂ ನಿರ್ದೇಶಕ ವಿನಾಯಕ ಹೆಬ್ಬಾರ್, ಶಾಲಾ ಕಾರ್ಯಕಾರಿ ನಿರ್ದೇಶಕಿ ವೀಣಾ ಭಟ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಪಕ ಗುರುದತ್ತಎಮ್. ಎಸ್. ಇತರರು ಇದ್ದರು. ಎನ್ ಎ ಭಟ್ ಸ್ವಾಗತಿಸಿದರು. ಸ್ವಪ್ನಜಾ ನಿರ್ವಹಿಸಿದರು. ಶ್ರೇಯಾ ವಂದಿಸಿದರು
Leave a Comment