ಯಲ್ಲಾಪುರ: ತಾಲ್ಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಮನೆ ಎಂಬಲ್ಲಿ ವಿದ್ಯುತ್ ಸರ್ವಿಸ್ ಲೈನ್ ಸರಿಪಡಿಸಲು ಹೋಗಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ.
ಪಟ್ಟಣ ವ್ಯಾಪ್ತಿಯ ಸಬಗೇರಿಯ ಆದಂಸಾಬ್ ಇ ಶೇಖ್ (75)ಮೃತಪಟ್ಟವರು.
ಅವರು ಉಮ್ಮಚಗಿಯ ಹುಣಸೇಮನೆಯಲ್ಲಿಅತಿಕ್ರಮಣ ಜಮೀನಿನಲ್ಲಿರುವ ತಮ್ಮ ಮನೆಗೆ ವಿದ್ಯುತ್ ಸಂಪರ್ಕ
ಕಡಿತಗೊಂಡಿದ್ದರಿಂದ ಸರಿಪಡಿಸಲು ಸಮೀಪದ ವಿದ್ಯುತ್ಕಂಬವನ್ನು ಏರಿದ್ದರು. ಸರ್ವಿಸ್ ಲೈನ್ ಸರಿಪಡಿಸುತ್ತಿದ್ದಾಗವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.
Leave a Comment