ಹೊನ್ನಾವರ; ಕಳೆದ ಎರಡು ವರ್ಷದಿಂದ ರಸ್ತೆಯಲ್ಲುದ್ದ ಪಟ್ಟಣದ ಬಸ್ ನಿಲ್ದಾಣ ೬ ಕೋಟಿ ವೆಚ್ಚದ ನಿರ್ಮಾಣವಾದರೂ ಅಧಿಕಾರಿಗಳ ಒಣಪ್ರತಿಷ್ಠೆಯಿಂದ ಮಳೆಗಾಲದ ಚರಂಡಿ ಕುಸಿತದಿಂದ ರಸ್ತೆ ಮೇಲೆ ನಿಲ್ದಾಣವಾಗಿದೆ.

ಬಹು ವರ್ಷದ ಬೇಡಿಕೆಯಾಗಿದ್ದ ಪಟ್ಟಣದ ಬಸ್ ನಿಲ್ದಾಣ ಆರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದರೂ ಗಟಾರ ಅಸಮರ್ಪಕತೆಯಿಂದ ಪ್ರಥಮ ಮಳೆಗಾಲದಲ್ಲೆ ಬಸ್ ಒಳಗಡೆ ಹೋಗದೆ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಕಳೆದ ಕೆಲ ದಿನದ ಹಿಂದೆ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಬಸ್ ನಿಲ್ದಾಣ ಒಂದು ಭಾಗದ ಗಟಾರ ಸ್ವಚ್ಚತೆಗೆ ಮುಂದಾಗಿ ಚರಂಡಿಗೆ ಮುಚ್ಚಿದ ಹಲಗೆ ತೆಗೆದಿಟ್ಟು ಹೊದವರು ಮತ್ತೆ ಇತ್ತ ಧಾವಿಸಿಲ್ಲ.

ಪಟ್ಟಣದ ವಿವಿಧಡೆಯಿಂದ ಆಗಮಿಸುವ ಗಟಾರ ನೀರು ಬಸ್ ನಿಲ್ದಾಣದ ಮುಂಭಾಗ ರಸ್ತೆಯೆ ಹೊಳೆಯಂತಾಗಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಯ ಪರಿಣಾಮ ಮತ್ತೆ ಚರಂಡಿ ಸುರಿದು ಸರಾಗವಾಗಿ ಹೋಗುವ ನೀರು ಮತ್ತೆ ರಸ್ತೆಯ ಮೇಲೆ ಬಂದಿರುದು ಒಂದಡೆಯಾದರೆ, ಇದರಿಂದ ನಿಲ್ದಾಣ ಒಳಗಡೆ ಬಸ್ ಹೊಗದೆ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಪಟ್ಟಣ ಪಂಚಾಯತಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ ಗಟಾರ ಅವ್ಯವಸ್ಥೆಯಿಂದ ಕೂಡಿದ್ದು, ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ. ಕೋಟಿ ವೆಚ್ಚದ ಬಸ್ ನಿಲ್ದಾಣ ನಿರ್ಮಾಣವಾದರೂ ಗಟಾರ ಸಮರ್ಪಕವಾಗಿಲ್ಲದ ಪರಿಣಾಮ ನಿಲ್ದಾಣದ ಪ್ರಯೋಜನ ಜನತೆಗೆ ತಲುಪುತ್ತಿಲ್ಲ. ಬಸ್ ರಸ್ತೆ ಮೇಲೆ ನಿಲ್ಲುದರಿಂದ ಮಳೆಯ ನೀರಿನಲ್ಲಿ ನೆನೆದು ಸಂಚರಿಸಬೇಕಿದೆ. ಈ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಬೇಕು ಎನ್ನುವುದು ತಾಲೂಕಿನ ಪ್ರಜ್ಞಾವಂತ ನಾಗರಿಕ ಅಭಿಪ್ರಾಯವಾಗಿದೆ.
Leave a Comment