ಯಲ್ಲಾಪುರ : ಜುಲೈ 15 ರಂದು ಪಟ್ಟಣ ದ ಎ.ಪಿ.ಎಂ.ಸಿ ಆವಾರದ ರೈತ ಸಭಾಂಗಣ ದಲ್ಲಿ ಒಂದು ದಿನದ ಉದ್ಯೋಗಾಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ ಕಾರ್ಯಕ್ರಮ ವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ.ಎಂದು ಸಚಿವರ ಕಾರ್ಯಾಲಯ ದ ಪ್ರಕಟನೆಯಲ್ಲಿ ತಿಳಿಸಿದ್ದಾರೆ .
ಗ್ರಾಮ ವಿಕಾಸ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಅಪ್ರೆಂಟಿಸ್ಶಿಪ್ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಆಯೋಜಿಸಿದೆ
ತರಬೇತಿಯಲ್ಲಿ ಎಸ್.ಎಸ್.ಎಲ್.ಸಿ ಪಿ.ಯು.ಸಿ, ಐ.ಟಿ.ಐ. ಡಿಪ್ಲೊಮ ಪದವಿ ಮತ್ತು ಇತರ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿದ ಕೋರಿದ್ದಾರೆ. ಅಭ್ಯರ್ಥಿಗಳು ಭಾಗವಹಿಸಬೇಕೆಂದು
ಗ್ರಾಮ ವಿಕಾಸ ಸಂಸ್ಥೆ, ವೃತ್ತಿಪರ, ಸಮಾಜ ಕಾಯಕರ್ತ ಮತ್ತು ಸೃಜನಾತ್ಮಕ ಇಂಜಿನಿಯರ್ಗಳನ್ನು ಒಳಗೊಂಡ ತಂಡವಾಗಿದೆ, ಸಂಸ್ಥೆಯ ಸಮಕಾಲಿನ ಸಮಸ್ಯೆಗಳು, ಕೌಶಲ್ಯ ಅಭಿವೃದ್ಧಿ ಗ್ರಾಮೀಣಾಭಿವೃದ್ಧಿ, ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಗುರುತಿಸಿ ఆ ದಿಸೆಯಲ್ಲಿ ಯುವಜನರಿಗೆ ತರಬೇತಿ ನೀಡಿ ಅವರಿಗೆ ಸೂಕ್ತ ಉದ್ಯೋಗಾವಕಾಶಗಳನ್ನು ಪಡೆಯಲು ನೆರವಾಗುತ್ತದೆ. ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ನೇತೃತ್ವದ “Skill India” ಹಾಗೂ ಕೌಶಲ್ಯ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. .
Leave a Comment