ಹೊನ್ನಾವರ : ತಾಲೂಕಿನ ಗೇರುಪೊಪ್ಪಾದ ಶರವಾತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿದ್ದು, ಹೇರಳವಾಗಿ ನೀರು ಹರಿದು ಬರುತ್ತಿದೆ.
ಹೀಗೆ ಮುಂದುವರಿದರೆ ಆಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ವಿದ್ಯತ್ ಉತ್ಪಾದನೆಯಿಂದ ಹೊರಬರುವ ಪ್ರಮಾಣದಷ್ಟೇ, ಅಂದರೆ ಗರಿಷ್ಠ 22,000 ಕ್ಯೂಸೆಕ್ವರೆಗಿನ ನೀರನ್ನು ರೇಡಿಯಲ್ ಗೇಟ್ ಗಳ ಮೂಲಕ ಹೊರಬಿಡಲಾಗುವುದು. ಶರವತಿ ನದಿ ತೀರದವರ ಎಚ್ಚರಿಕೆಯಿಂದ ಇರುವಂತೆ ಕರ್ನಾಟಕ ವಿದ್ಯತ್ ನಿಗಮ ಪ್ರಥಮ ಹಂತದ ನೋಟಿಸ್ ಜಾರಿ ಮಾಡಿದೆ.
ಇಲ್ಲಿ ಪ್ರತಿನಿತ್ಯ ವಿದ್ಯತ್ ಉತ್ಪಾದನೆಗೆ 5000 ರಿಂದ 22000 ಕ್ಯೂಸೆಕ್ಸ್ ನೀರನ್ನು ವಿದ್ಯತ್ ಉತ್ಪಾದನೆಗೆ ಬಳಸಲಾಗುತ್ತಿತ್ತು. ಒಂದೊಮ್ಮೆ ವಿದ್ಯುತ್ ಬೇಡಿಕೆ ಬಾರದೇ ಇದ್ದಲ್ಲಿ ಗೇರುಸೊಪ್ಪಾ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ ತಲುಪುವ ಸಾಧ್ಯತೆ ಇದೆ.
Leave a Comment