ಯಲ್ಲಾಪುರ: :ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಪಟ್ಟಣದ ಅರಣ್ಯಭವನದಲ್ಲಿ ಜು ೧೫ ರಂದು ಮಧ್ಯಾಹ್ನ ೩ ಗಂಟೆಗೆ ಪತ್ರಿಕಾ ದಿನಾಚರಣೆ ,ಸನ್ಮಾನ – ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾ ಕಾನಿಪ ಸಂಘದ ಅಧ್ಯಕ್ಷ ಕೆ.ಎಸ್ ಭಟ್ಟ ಹೇಳಿದರು ಪತ್ರಿಕಾ ದಿನಾಚರಣೆಯ ಕುರಿತು ಮಾಹಿತಿ ನೀಡಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಲಾವಿದ ,ಶಿಕ್ಷಕಸತೀಶ ಯಲ್ಲಾಪುರ ಪರಿಸರ ಮತ್ತು ಮಾಧ್ಯಮ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ವಿಧಾನ ಪರಿಷತ ಸದಸ್ಯ ಶಾಂತರಾಮ ಸಿದ್ದಿ , ವಾ.ಕ.ರ.ಸಾ.ಸಂಸ್ಥೆ ಅಧ್ಯಕ್ಷ ವಿ. ಎಸ್. ಪಾಟೀಲ, ರಾ.ವಿ.ಯೋಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಹಳಿಯಾಳ ದಪ್ರಶಾಂತ ದೇಶಪಾಂಡೆ ,ಉಪಅರಣ್ಯ ಸಂರಕ್ಷಣಾಧಿಕಾರಿ ಶಶಿಧರ ಹೆಗಡೆ , ತಹಶೀಲ್ದಾರ ಶ್ರೀಕೃಷ್ಣ ಕಾಮಕರ, ತಾಪಂ ಸಿಓ ಜಗದೀಶ ಕಮ್ಮಾರ, ಧಾತ್ರಿ ಫೌಂಡೇಶನ್ ಶ್ರೀನಿವಾಸ ಭಟ್ಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಎಸ್. ಭಟ್ಟ, ಕಾನಿಪ ಜಿಲ್ಲಾಧ್ಯಕ್ಷ ಸುಬ್ರಾಯ ಬಕ್ಕಳ,ಉಪಸ್ಥಿತರಿರುವರು ಎಂದರು.ಕಾರ್ಯದರ್ಶಿ ಶ್ರೀಧರ ಅಣಲಗಾರ ಮಾತನಾಡಿ ಹಿರಿಯ ಪತ್ರಕರ್ತರಾದ
ಸತೀಶ ಯಲ್ಲಾಪುರ, ಉಮಾಮಹೇಶ್ವರ ಭಟ್ಟ ಮೊಳೆಮನೆ, ಬಿ. ಜಿ. ಹೆಗಡೆ ಗೇರಾಳ, ಪತ್ರಕೆ ವಿತರಕ ರಾಜು ಉಡುಪಿಕರ ಅವರಿಗೆ ಸನ್ಮಾನಿಸಲಾಗುವದು ಹಾಗೂ À ಎಸ್.ಎಸ್.ಎಲ್.ಸಿ. ಹೆಚ್ಚಿನ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ,ಜಿ. ಎನ್. ಭಟ್ಟ ಟ್ಟಿಗದ್ದೆ , ದತ್ತಾತ್ರಯ ಭಟ್ಟ ಕಣ್ಣಿಪಾಲ,ಜಿಲ್ಲಾ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ,ಜಿಲ್ಲಾ ಕಾರ್ಯಕಾರಣಿ ಸದಸ್ಯೆ ಪ್ರಭಾವತಿÀ ಗೋವಿ , ಸದಸ್ಯರಾದ ಸುಬ್ರಾಯ ಬಿದ್ರೆಮನೆ, ಜಯರಾಜಗೋವಿ ಇದ್ದರು.
Leave a Comment