ಯಲ್ಲಾಪುರ :ಪಟ್ಟಣದ ಎಪಿಎಮ್‌ಸಿ ರೈತಭವನದಲ್ಲಿ ಗ್ರಾಮ ವಿಕಾಸ ಸೊಸೈಟಿ ವತಿಯಿಂದ ಆಯೋಜಿಸಿದ್ದ ಉದ್ಯೋಗಾಧಾರಿತ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ .ಉಧ್ಘಾಟಿಸಿ ಮಾತನಾಡಿ ಇಂದು ಮೂಲಭೂತ ಕೌಶಲ್ಯಗಳ ಮೇಲೆ ಅರ್ಹತೆಯನ್ನು ಅಳೆಯಲಾಗುತ್ತಿದೆ. ವಿವಿಧ ಭಾಷೆಗಳ ಮೇಲಿನ ಹಿಡಿತ ಹಾಗೂ ಕಂಪ್ಯೂಟರ್‌ನ ಜ್ಞಾನ ಹೊಂದಿದAತವರು ವಿಶ್ವದ ಯಾವುದೇ ಮೂಲೆಯಲ್ಲಾದರೂ ಸಹ ಬದುಕಬಲ್ಲರು ಹಾಗೂ ಜೀವನದಲ್ಲಿ ಗೆಲ್ಲಬಲ್ಲರು ಎಂದ
ಅವರು, ಇಂದಿನ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ನೈಪುಣ್ಯತೆಯ ಕೊರತೆಯಿದೆ. ಜಿಲ್ಲೆಯ ಯುವ ಪೀಳಿಗೆಯವರು ರಾಷ್ಟ್ರ- ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕೀರ್ತಿ ಬೆಳಗುತ್ತಿದ್ದಾರೆ. ಅಂತವರ ಸಾಲಿಗೆ ಇನ್ನಷ್ಟು ಜನ ಸೇರಬೇಕೆಂಬುದು ನನ್ನ ಹಾಗೂ ನಮ್ಮ ಸರ್ಕಾರದ ಮಹದಾಸೆಯಾಗಿದೆ. ಅಂತಹ ಮೂಲಭೂತ ಕೌಶಲ್ಯಗಳ ಅಭಿವೃದ್ಧಿಗೆ ಸಹಾಯಕವಾಗಲೆಂದು ಇಂತಹ ತರಬೇತಿ ಶಿಬಿರಗಳ ಆಯೋಜನೆಯನ್ನು ಮಾಡಲಾಗುತ್ತಿದೆ ಎಂದರು.
ತರಬೇತುದಾರ ಪ್ರಶಾಂತ್‌ಕುಮಾರ ಮಾತನಾಡಿ, ನಮ್ಮಲ್ಲಿ ಕೆಲಸಕ್ಕೆ ಅನೇಕ ಅವಕಾಶಗಳಿದ್ದರೂ, ಕೌಶಲ್ಯಗಳ ಕೊರತೆ ಇರುವುದರಿಂದ ನಿರುದ್ಯೋಗ ಸಮಸ್ಯೆ ಉಂಟಾಗುತ್ತಿದೆ. ಅವುಗಳ ಕುರಿತು ಸಮರ್ಪಕವಾದ ಮಾಹಿತಿ ನೀಡಿ, ಅಗತ್ಯವಿರುವ ಕೌಶಲ್ಯಗಳ ಅಭಿವೃದ್ಧಿ ಪಡಿಸುವುದೇ ಇಂದಿನ ತರಬೇತಿಯ ಮೂಲ ಗುರಿಯಾಗಿದೆ. ಎಂದರು.
ಗ್ರಾಮೀಣ ವಿಕಾಸ ಸೊಸೈಟಿ ಪ್ರಮುಖ ಶ್ರೀಯಾಂಶ ಕುಮಾರ್ ಜೈನ್ ಮಾತನಾಡಿ, ನಮ್ಮಲ್ಲಿ ಕೆಲಸಗಳಿದ್ದರೂ, ಕೆಲಸಗಾರರ ಕೊರತೆಯಿದೆ. ಬೇರೆ ರಾಜ್ಯ ಗಳಿಂದ ಕುಶಲ ಕಾರ್ಮಿಕ ರನ್ನು ಕರೆ ತರುತ್ತಿದ್ದರು.ಇಂತಹ ತರಬೇತಿಗಳಿಂದ ನಮ್ಮ ರಾಜ್ಯದ ಜನರೇ ಕೆಲಸಕ್ಕೆ ಲಭ್ಯವಾಗುತ್ತಾರೆಂಬುದು ಸಂತಸದ ಸಂಗತಿ.ಎAದರು.
ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಸ್ಥಾಯಿ ಸಮಿತಿ ಅಧ್ಯಕ್ಷ ಆದಿತ್ಯ ಗುಡಿಗಾರ್, ಸದಸ್ಯರಾದ ಅಮಿತ್ ಅಂಗಡಿ, ಸತೀಶ ನಾಯ್ಕ, ಪ್ರಶಾಂತ ತಳವಾರ, ರಾಜು ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ್ರಮುಖರಾದ ಶಿರೀಶ ಪ್ರಭು, ಮುರುಳಿ ಹೆಗಡೆ, ಗಣೇಶ ಹೆಗಡೆ, ಗಿರೀಶ್ ಮತ್ತಿಕೊಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ ಮುಂತಾದವರು ಇದ್ದರು. ಮಂಜುಳಾ ಸ್ವಾಗತಿಸಿ ಪ್ರಾಸ್ತಾವಿಕಗೈದರು. ಕೇಬಲ್ ನಾಗೇಶ ನಿರ್ವಹಿಸಿ, ವಂದಿಸಿದರು.
Leave a Comment